Sunday, April 28, 2024
Homeರಾಜ್ಯಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಾಂತರಾಜ್ ವರದಿ ಸ್ವೀಕರಿಸಲಿ : ಹೆಚ್‌ಡಿಕೆ ಸವಾಲ್

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಾಂತರಾಜ್ ವರದಿ ಸ್ವೀಕರಿಸಲಿ : ಹೆಚ್‌ಡಿಕೆ ಸವಾಲ್

ಬೆಂಗಳೂರು,ಜ.30- ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ವರದಿಯನ್ನು ತಾಕತ್ತಿದ್ದರೆ ಸ್ವೀಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿ ಅತ್ಯುತ್ತಮವಾಗಿದ್ದರೆ ಸ್ವೀಕರಿಸಿ. ಆಡಳಿತ ಪಕ್ಷದವರೇ ವರದಿ ವೈಜ್ಞಾನಿಕವಾಗಿಲ್ಲ ಎಂದಿದ್ದಾರೆ.

ಮಾತೆತ್ತಿದ್ದರೆ ಕುಮಾರಸ್ವಾಮಿಯವರು ವರದಿ ಸ್ವೀಕರಿಸಿಲ್ಲ ಎಂದು ಆರೋಪಿಸುವ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಇನ್ನು ಏಕೆ ತಾವು ವರದಿ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದರು. ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಹಾಕದ ವರದಿಯನ್ನು ಸ್ವೀಕರಿಸಬಹುದೇ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮುದಾಯದ ಬಡ ಕುಟುಂಬಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ನೆರವಾಗುವುದಾದರೆ ನಮ್ಮ ಪಕ್ಷ ಎಲ್ಲ ರೀತಿಯ ಸಹಕಾರ ಕೊಡಲಿದೆ. ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವುದಾದರೆ ಷರತ್ತು ರಹಿತ ಬೆಂಬಲ ಕೊಡುತ್ತೇವೆ. ನೀವು ಬರೆಸಿರುವ ವರದಿ( ಮುಖ್ಯಮಂತ್ರಿ) ಎಂದು ಆರೋಪಿಸಿದರು.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಅನ್ನೊದು ಜುಮ್ಲಾ : ಪ್ರಿಯಾಂಕಾ

ಶೋಷಿತ ವರ್ಗಗಳ ಅನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರಾಜಕೀಯಕ್ಕೆ ಬಂದು 35 ವರ್ಷಕ್ಕೂ ಹೆಚ್ಚಾಗಿದೆ. ಅಂದಿನಿಂದ ಇಂದಿನವರೆಗೂ ಅವರಿಗೆ ಏಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿಲ್ಲ ಎಂದು ಪ್ರಶ್ನಿಸಿದರು. ಬಿಹಾರದಲ್ಲಿ 9ನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್‍ಕುಮಾರ್ ಅಧಿಕಾರ ಸ್ವೀಕಾರ ಮಾಡಿರುವುದು ದಾಖಲೆಯಾಗಿದೆ.

ಇಂಡಿ ಒಕ್ಕೂಟದಿಂದ ನಿತೀಶ್‍ಕುಮಾರ್ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕಾಂಗ್ರೆಸ್‍ನಿಂದ ಹೊರಬಂದು ಸಹವಾಸವೇ ಬೇಡ ಎಂದು ದೂರ ಸರಿದಿದ್ದಾರೆ ಎಂದರು. ರಾಮಮಂದಿರ ನಿರ್ಮಾಣಕ್ಕೆ ಜನರಿಂದ ಸಂಗ್ರಹಿಸಿದ ದೇಣಿಗೆಯ ವಿಚಾರವನ್ನು ಜನರ ಮುಂದಿಡಿ ಎಂದು ನಾನು ಹೇಳಿರುವುದು ನಿಜ ಎಂದ ಅವರು, ಸರ್ಕಾರದ 5 ಗ್ಯಾರಂಟಿಗಳಿಗೆ ಜನರ ತೆರಿಗೆ ಬಳಸಲಾಗುತ್ತಿದೆ ಹೊರತು ಕಾಂಗ್ರೆಸ್‍ನ ಹಣ ಬಳಸಲಾಗುತ್ತಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಒಂದು ವೇಳೆ ಅವರು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಅದಕ್ಕೆ ನನ್ನ ಬೆಂಬಲ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

RELATED ARTICLES

Latest News