Thursday, February 29, 2024
Homeರಾಜ್ಯಕಾಂಗ್ರೆಸಿಗರು ಈಸ್ಟ್ ಇಂಡಿಯ ಕಂಪನಿಯ ಮಾಲೀಕರಿದ್ದಂತೆ : ಕುಮಾರಸ್ವಾಮಿ

ಕಾಂಗ್ರೆಸಿಗರು ಈಸ್ಟ್ ಇಂಡಿಯ ಕಂಪನಿಯ ಮಾಲೀಕರಿದ್ದಂತೆ : ಕುಮಾರಸ್ವಾಮಿ

ಬೆಂಗಳೂರು,ಜ.30-ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಧ್ವಜ ಘರ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಪ್ರಾಮಾಣಿಕವಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನರು ನನ್ನನ್ನು ಬೆಳೆಸಿದ್ದಾರೆ. ಯಾರಿಗೆ ಅನ್ಯಾಯವಾದರೂ ಅವರ ರಕ್ಷಣೆಗೆ ಹೋಗುವೆ. ಬೆಂಕಿ ಹಚ್ಚಲು ಹೋಗಿರಲಿಲ್ಲ. ಸಂಘರ್ಷಕ್ಕೆ ಪ್ರಚೋದನೆ ನೀಡುವ ಭಾಷಣ ಮಾಡಲಿರಲಿಲ್ಲ. ಅಧಿಕಾರಿಗಳ ವೈಫಲ್ಯವನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದರು. ಧ್ವಜ ವಿವಾದದ ವಿಚಾರದಲ್ಲಿ ನಾನೇನಾದರೂ ತಪ್ಪು ಮಾಡಿದ್ದರೆ ನೇಣು ಹಾಕಲಿ. ನಿಮ್ಮ ತಪ್ಪಿದ್ದರೆ ಯಾವ ಪ್ರಾಯಶ್ಚಿತ ಮಾಡಿಕೊಳ್ಳುತ್ತೀರಿ, ಘಟನೆ ಹಿನ್ನಲೆಯ ವಾಸ್ತಾಂಶಗಳ ಮಾಹಿತಿಯ ದಾಖಲೆಗಳನ್ನು ಪ್ರದರ್ಶಿಸಿದ್ದೇನೆ ಎಂದರು.

BIG NEWS : ನಿಷೇಧಿತ ಪಿಎಫ್‍ಐನ 15 ಮಂದಿಗೆ ಮರಣದಂಡನೆ

ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದೇ ಮಹಾ ಅಪರಾಧವೇ ಎಂದು ಪ್ರಶ್ನಿಸಿದ ಅವರು, ದಲಿತ ಸಮುದಾಯದವರ ಕಾರ್ಯಕ್ರಮದಲ್ಲಿ ಜೈ ಭೀಮ್ ಎಂಬ ನೀಲಿ ಬಣ್ಣದ ಶಾಲು ಹಾಕಿದ್ದೇನೆ. ರೈತರ ಹಸಿರು ಶಾಲು ಹಾಕಿದ್ದೇನೆ. ಮಂಡ್ಯ ಶಾಸಕರು ಒಂದು ಲಕ್ಷ ತಿರಂಗ ಧ್ವಜವನ್ನು ಮಂಡ್ಯ ಜಿಲ್ಲೆಯ ಮನೆ ಮನೆ ಮೇಲೆ ಹಾರಿಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ರಾಷ್ಟ್ರ ಧ್ವಜದಲ್ಲಿರುವುದು ಕೇಸರಿಯ ಬಣ್ಣ. ಸ್ವಾತಂತ್ರ್ಯ ಹೋರಾಟಗಾರರು ಹಿಂದಿನವರು ಕೇಸರಿ ಬಣ್ಣ ಧರಿಸಿದ್ದಾರೆ. ಈಗಿನ ಕಾಂಗ್ರೆಸಿಗರು ಈಸ್ಟ್ ಇಂಡಿಯ ಕಂಪನಿಯ ಮಾಲೀಕರಿದ್ದಂತೆ. ಶಾಂತಿ ವಾತಾವರಣದ ಬಗ್ಗೆ ನಮ್ಮ ಪಕ್ಷ ಉಳಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್‍ನವರಿಂದ ಪಾಠ ಕಲಿಯಬೇಕಿಲ್ಲ ಎಂದರು.

ನಮಗೆ ಮಂಡ್ಯ ಜಿಲ್ಲೆಯ ಜನರು ಪ್ರಮಾಣ ಪತ್ರ ಕೊಡುತ್ತಾರೆಯೇ ಹೊರತು ನಿಮ್ಮಿಂದ ಅದನ್ನು ಪಡೆಯುವ ಅಗತ್ಯವಿಲ್ಲ. ನಾವು ಗೆದ್ದಾಗಲೂ, ಸೋತಾಗಲೂ ಜನರ ಜೊತೆಯೇ ಇದ್ದೇವೆ. ನಾವು ಸೋತಾಗ ಅಂಜಿ ಕುಳಿತುಕೊಳ್ಳಲಿಲ್ಲ. ಯಾರಿಗೂ ಅಡಿಯಾಳಲ್ಲ. ಆದರೆ ನಾಡಿನ ಜನರಿಗೆ ನಾವು ಅಡಿಯಾಳು ಎಂದು ಹೇಳಿದರು.ಮಂಡ್ಯದಲ್ಲಿ ಹಿಂದುತ್ವದ ಬಗ್ಗೆಯಾಗಲಿ, ಹನುಮ ಧ್ವಜದ ಬಗ್ಗೆ ಮಾತನಾಡಿಲ್ಲ. ಸರ್ಕಾರದ ವೈಫಲ್ಯಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ ಎಂದರು.

ಬಿಜೆಪಿ-ಜೆಡಿಎಸ್ ಯುವಕರನ್ನು ಪ್ರಚೋದಿಸಿ ಗಲಭೆ ಸೃಷ್ಟಿಗೆ ಯತ್ನ : ಸಚಿವ ಚೆಲುವರಾಯಸ್ವಾಮಿ

ಗೌರಿ ಶಂಕರ ಟ್ರಸ್ಟ್‍ಗೆ ಧ್ವಜ ಸ್ತಂಭ ನಿರ್ಮಾಣಕ್ಕೆ ಗ್ರಾಮಪಂಚಾಯ್ತಿ ಅನುಮತಿ ನೀಡಿದೆ. ಅದರಲ್ಲಿ ಯಾವ ಧ್ವಜ ಎಂಬುದು ಉಲ್ಲೇಖವಿಲ್ಲ. ಕಳೆದ ನವೆಂಬರ್ 27ರಂದೇ ಟ್ರಸ್ಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಡಿ.29ರಂದು ಅರ್ಜಿ ಸ್ವೀಕರಿಸಿದಷ್ಟೇ ಮಾಡಿ ದಿನಾಂಕ ತಿದ್ದಿದ್ದಾರೆ. ದಾಖಲೆ ಸೃಷ್ಟಿಸಿದ್ದಾರೆ. ತ್ರಿವರ್ಣ ಧ್ವಜ ಅಥವಾ ಕನ್ನಡ ಧ್ವಜ ಮಾತ್ರ ಹಾರಿಸಬೇಕೆಂಬ ಉಲ್ಲೇಖವಿದೆ. ಜ.19ರಂದು ಅನುಮತಿ ಪತ್ರ ಕೊಟ್ಟು, ಐದು ಷರತ್ತುಗಳನ್ನು ಹಾಲಾಗಿದೆ. ಕೆಂಪೇಗೌಡರ, ಕುವೆಂಪು ಪ್ರತಿಮೆಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಮಾಹಿತಿ ಇದೆ. ಇದೆಲ್ಲ ಸಂಗತಿಗಳನ್ನು ಸೃಷ್ಟಿ ಮಾಡಿಕೊಳ್ಳಲಾಗಿದೆ. ನಾನು ಬೆಂಕಿ ಹಚ್ಚಿ, ಫ್ಲೆಕ್ಸ್ ಹರಿಯಿರಿ ಎಂದು ಯಾರಿಗೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿ.20ರಂದು ಕೆರಗೋಡು ಗ್ರಾಮಸ್ಥರು ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದಾರೆ. ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮಸ್ಥರೇ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಈ ಧ್ವಜ ಸ್ತಂಭವನ್ನು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು. ಈಗ ಶಾಸಕರನ್ನು ಧ್ವಜಸ್ತಂಭ ಉದ್ಘಾಟನೆಗೆ ಕರೆದಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜಕೀಯ ಲಾಭಕ್ಕಾಗಿ ನಾನು ಮಂಡ್ಯಕ್ಕೆ ಹೋಗಿದ್ದರೆ, ಗ್ರಾಮಪಂಚಾಯ್ತಿ ಪಿಡಿಒ ಅವರನ್ನು ಏಕೆ ಅಮಾನತು ಮಾಡಿದ್ದೀರಿ? ಅಮಾನತು ಆದೇಶ ಹೊರಬೀಳುವ ಮುನ್ನವೇ ಮಂಡ್ಯ ಶಾಸಕರು ಅಮಾನತು ಮಾಡುವುದಾಗಿ ಹೇಳಿಕೆ ನೀಡುತ್ತಾರೆ. ಪೊಲೀಸ್ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳಲಾಗಿದೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದರು.

RELATED ARTICLES

Latest News