Thursday, September 19, 2024
Homeಬೆಂಗಳೂರುಬೆಂಗಳೂರಿನ ಪಾರ್ಕ್‌ಗಳಲ್ಲಿ ಸಾರ್ವಜನಿಕ ಭೇಟಿ ಸಮಯ ಬದಲಾವಣೆಗೆ ಆಗ್ರಹ

ಬೆಂಗಳೂರಿನ ಪಾರ್ಕ್‌ಗಳಲ್ಲಿ ಸಾರ್ವಜನಿಕ ಭೇಟಿ ಸಮಯ ಬದಲಾವಣೆಗೆ ಆಗ್ರಹ

Demand for change in public visiting hours in Bengaluru parks

ಬೆಂಗಳೂರು, ಆ.22- ಪಾಲಿಕೆ ವ್ಯಾಪ್ತಿಯ ಉದ್ಯಾನ ವನಗಳಲ್ಲಿ ಸಾರ್ವಜನಿಕರ ಬಳಕೆಗೆಂದು ನಿಗದಿಪಡಿಸಿ ರುವ ಸಮಯವನ್ನು ಬದಲಿಸ ಬೇಕೆಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನವನ ಗಳಲ್ಲಿ ಸಾರ್ವಜನಿಕರು ವಿಹರಿಸಲು ಮತ್ತು ವಿಶ್ರಾಂತಿ ಪಡೆಯಲು ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸಮಯವನ್ನು ನಿಗದಿಪಡಿಸಿರುವ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರ ಆದೇಶದಿಂದ ಸಾಕಷ್ಟು ಅನಾಹುತಗಳು ಸಂಭವಿ ಸುವ ಸಾಧ್ಯತೆಗಳಿರು ವುದರಿಂದ ಸಮಯ ಬದ ಒಾವಣೆ ಮಾಡಬೇಕು ಎಂದು ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿಯೊಂದು ಉದ್ಯಾನವನವನ್ನು ಹತ್ತಾರು ಲಕ್ಷ ರೂ.ಗಳಷ್ಟು ಸಾರ್ವಜನಿಕ ತೆರಿಗೆ ಹಣವನ್ನು ವ್ಯಯಿಸಿ ಅಭಿವೃದ್ಧಿಪಡಿಸಲಾಗಿದ್ದು, ಸದರಿ ಉದ್ಯಾನವನಗಳ ಲ್ಲಿರುವ ಸಸಿಗಳು ಮತ್ತು ಗಿಡಗಳ ನಿರ್ವಹಣೆಗೆ ಪ್ರತೀ ನಿತ್ಯ ನಾಲ್ಕೈದು ಗಂಟೆಗಳಷ್ಟು ಕಾಲಾವಕಾಶ ಬೇಕಿರುತ್ತದೆ.

ವಿಶೇಷವಾಗಿ ಸದರಿ ಉದ್ಯಾನವನ ಗಳಲ್ಲಿನ ಸಸಿಗಳಿಗೆ – ಗಿಡಗಳಿಗೆ ಪ್ರತೀ ನಿತ್ಯ ಕಡ್ಡಾಯ ವಾಗಿ ನೀರನ್ನು ಹಾಕಿ ಪೋಷಿ ಸುವ ಕೆಲಸವನ್ನು ಆಯಾ ಉದ್ಯಾನ ವನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿಗಳು ಮಾಡಬೇಕಿರುತ್ತದೆ.

ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸಾರ್ವಜನಿಕರ ಬಳಕೆಗೆಂದು ಬೆಳಿಗ್ಗೆ 06 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮತ್ತು ಸಂಜೆ 04 ರಿಂದ ರಾತ್ರಿ 08 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ, ಮುಖ್ಯ ಆಯುಕ್ತರ ಹೊಸ ಆದೇಶದಿಂದಾಗಿ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಸುಶಿಕ್ಷಿತರಿಗೆ ಅಸಹ್ಯವೆನ್ನಿಸುವ ಘಟನೆಗಳು, ಕಾನೂನು ಬಾಹಿರ ಚಟುವಟಿಕೆ ಗಳು ನಡೆಯುವುದಕ್ಕೆ ಆಸ್ಪದ ಮಾಡಿ ಕೊಟ್ಟಿರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ವಿಶೇಷವಾಗಿ ಈ ಸಮಯದಲ್ಲಿ ಕೆಲವು ಯುವಕ, ಯುವತಿಯರು ಸುಶಿಕ್ಷಿತ ನಾಗರಿಕರಿಗೆ ಮುಜುಗರವಾಗುವಂತಹ ರೀತಿಯಲ್ಲಿ ಸಾರ್ವಜನಿಕವಾಗಿ ವರ್ತಿಸು ವುದು ಮತ್ತು ಉದ್ಯಾನವನಗಳ ಭದ್ರತಾ ಸಿಬ್ಬಂದಿಗಳೊಂದಿಗೆ ಅನುಚಿತ ವಾಗಿ ವರ್ತಿಸುವ ಘಟನೆಗಳು ಸರ್ವೆ ಸಾಮಾನ್ಯವಾಗಿರುತ್ತವೆ.

ಆದು ದರಿಂದ, ಇಂತಹ ಮುಜುಗರದ ಸನ್ನಿವೇಶಗಳನ್ನು ತಪ್ಪಿಸುವ ದೃಷ್ಟಿ ಯಿಂದ ಮತ್ತು ಅಪರಾಧ ಪ್ರಕರಣಗಳಿಗೆ ಎಡೆಮಾಡಿಕೊಡುವ ಅವಕಾಶಗಳನ್ನು ತಪ್ಪಿಸುವ ಸಲುವಾಗಿ ಹಾಗೂ ಇದೆಲ್ಲಕ್ಕಿಂತಲೂ ಮಿಗಿಲಾಗಿ ಕೋಟ್ಯಾಂತರ ರೂ. ವೆಚ್ಛ ಮಾಡಿ ನಿರ್ಮಿಸಿರುವ ಉದ್ಯಾನವನಗಳಲ್ಲಿನ ಗಿಡ-ಮರ-ಸಸಿಗಳಿಗೆ ಪ್ರತೀ ನಿತ್ಯ ನಿಯ ಮಿತವಾಗಿ ನೀರುಣಿಸುವ ಕಾರ್ಯಕ್ಕೆ ತೊಂದರೆ ಯಾಗದಂತೆ ಈ ಹಿಂದೆ ಸಮಯವನ್ನು ನಿಗಧಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News