ಬೆಂಗಳೂರು,ಮಾ.30- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಲಿಕಾಫ್ಟರ್ಗಳಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕಳೆದ ಚುನಾವಣೆಗೆ ಹೊಲಿಸಿದರೆ ಈ ಬಾರಿ ಅದಕ್ಕಿಂತ ಮೂರು ಪಟ್ಟು ಹೆಚ್ಚು ಕಾಫ್ಟರ್ಗಳಿಗೆ ಬೇಡಿಕೆ ಬಂದಿರುವುದು ವಿಶೇಷವಾಗಿದೆ.
ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಆಗಮಿಸುವ ಸ್ಟಾರ್ ಪ್ರಚಾರಕರುಗಳಿಗಾಗಿ ಮೂರು ಪಕ್ಷಗಳ ಮುಖಂಡರುಗಳು ಹೆಲಿಕಾಫ್ಟರ್ ಬುಕ್ಕಿಂಗ್ಗೆ ಮುಗಿ ಬಿದ್ದಿದ್ದಾರೆ. ಹೀಗಾಗಿ ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನಗಳಿಗೆ -ಫುಲ್ ಡಿಮ್ಯಾಂಡ್ ಬಂದಿದೆ.
ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಕೆಲ ಹೆಲಿಕಾಪ್ಟರ್ ಗಳನ್ನು ಕಾಯ್ದೆರಿಸುವಂತೆ ಎಚ್ಎಎಲ್ ಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಮಾತ್ರವಲ್ಲ, ಮೂರು ಪಕ್ಷದ ಸ್ಟಾರ್ ಪ್ರಚಾರಕರಿಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ನೂರಾರು ಹೆಲಿಕಾಫ್ಟರ್ಗಳನ್ನು ಕರೆಸಿಕೊಳ್ಳಲಾಗಿದೆ. ಹೆಲಿಕಾಪ್ಟರ್, ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಫ್ಟರ್ಗಳ ಬಾಡಿಗೆ ದರವನ್ನು ಏರಿಕೆ ಮಾಡಿರುವುದು ವಿಶೇಷವಾಗಿದೆ.
ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ,ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್ಗಳನ್ನು ಕರೆಸಿಕೊಳ್ಳಲಾಗಿದ್ದು, ಈ ಬಾರಿ ಶೇ.15ರಷ್ಟು ದರ ಹೆಚ್ಚಳ ಮಾಡಲಾಗಿದೆ.ರಾಜ್ಯದಲ್ಲಿ ಹುಬ್ಬಳ್ಳಿ, ಕಲಬುರ್ಗಿ, ಬೆಂಗಳೂರಿನ ಹೆಚ್ ಎಎಲ್ , ಜಕ್ಕೂರು, ವೈಟ್ ಫೀಲ್ಡ್, ಬೀದರ್ ಬೆಳಗಾವಿ ಏರ್ ಪೋರ್ಟ್ ಹಾಗೂ ಹೆಲಿಪ್ಯಾಡ್ಗಳಲ್ಲಿ ಕಾಫ್ಟರ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಟಾರ್ ಪ್ರಚಾರಕರನ್ನು ಕರೆದೊಯ್ಯುವ ಕಾಫ್ಟರ್ಗಳು ಅಲ್ಲಿಂದ ಅವರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು ಕಾರ್ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿವೆ.
ಪ್ರತಿಗಂಟೆಗೆ ಕಾಫ್ಟರ್ಗಳ ಬಾಡಿಗೆ 2 ಆಸನದ ಹೆಲಿಕಾಪ್ಟರ್ಗೆ ಒಂದು ಗಂಟೆಗೆ ಎರಡೂವರೆ ಲಕ್ಷ , 4 ಆಸನದ ಹೆಲಿಕಾಪ್ಟರ್ಗೆ ಮೂರು ಲಕ್ಷ , 6 ಆಸನದ ಮಿನಿ ವಿಮಾನಕ್ಕೆ 3.50 ಲಕ್ಷ ರೂ.ಗಳ ಬಾಡಿಗೆ ನಿಗದಿ ಮಾಡಲಾಗಿದೆ. ಅದೇ ರೀತಿ ಎಂಟು ಆಸನದ ಮಿನಿ ವಿಮಾನಕ್ಕೆ 4 ಲಕ್ಷ ರೂ, 13 ಆಸನದ ಮಿನಿವಿಮಾನಕ್ಕೆ ಒಂದು ಗಂಟೆಗೆ ನಾಲ್ಕುವರೆ ಲಕ್ಷ ರೂ.ಗಳ ಬಾಡಿಗೆ ಗೊತ್ತುಪಡಿಸಲಾಗಿದೆ. ಆದರೂ ಕಾಫ್ಟರ್ಗಳ ಬೇಡಿಕೆ ಮಾತ್ರ ಕುಂದಿಲ್ಲ.