Saturday, April 13, 2024
Homeಕ್ರೀಡಾ ಸುದ್ದಿಕುಲ್ದೀಪ್‍ಗೆ 5 ವಿಕೆಟ್, ಟೆಸ್ಟ್‌ಗೆ ಪಡಿಕ್ಕಲ್ ಎಂಟ್ರಿ

ಕುಲ್ದೀಪ್‍ಗೆ 5 ವಿಕೆಟ್, ಟೆಸ್ಟ್‌ಗೆ ಪಡಿಕ್ಕಲ್ ಎಂಟ್ರಿ

ಧರ್ಮಶಾಲಾ, ಮಾ.7- ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಸ್ಪಿನ್ ಚಮತ್ಕಾರ (72ಕ್ಕೆ5) ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭಿಕ ಆಟಗಾರರಾದ ಝಾಕ್ ಕ್ರಾವ್ಲಿ (79 ರನ್) ಅವರ ಅರ್ಧಶತಕದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು.

ಆದರೆ ಭೋಜನ ವಿರಾಮದ ನಂತರ ಕ್ರಾವ್ಲಿ ಅವರು ಕುಲ್ದೀಪ್ ಯಾದವ್‍ಗೆ ವಿಕೆಟ್ ಒಪ್ಪಿಸಿದ ನಂತರ ಇಂಗ್ಲೆಂಡ್‍ನ ಆಟಗಾರರು ಮಾರ್ಚ್ ಫಾಸ್ಟ್ ನಡೆಸುವಂತೆ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 190 ಗಳಿಸಿದ್ದು ಅಲ್ಪ ಮೊತ್ತಕ್ಕೆ ಕುಸಿಯುವ ಒತ್ತಡಕ್ಕೆ ಸಿಲುಕಿದೆ.

ಟೆಸ್ಟ್‌ಗೆ ಪಡಿಕ್ಕಲ್ ಎಂಟ್ರಿ
ಧರ್ಮಶಾಲಾ, ಮಾ.7- ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಬೇಕೆಂಬ ಕನ್ನಡಿಗ ದೇವದತ್ ಪಡಿಕ್ಕಲ್ ಕನಸು ಕೊನೆಗೂ ನನಸಾಗಿದೆ. ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರ್‍ಸಿಬಿ ಆಟಗಾರ ರಜತ್ ಪಾಟಿದಾರ್ ಬದಲಿಗೆ ಪ್ಲೇಯಿಂಗ್ 11ನಲ್ಲಿ ಕನ್ನಡಿಗ ಪಡಿಕ್ಕಲ್ ಸ್ಥಾನ ಪಡೆದಿದ್ದು ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿ ಟಾಮ್ ಹ್ಯಾಟ್ರ್ಲಿ ಅವರ ಕ್ಯಾಚ್ ಪಡೆದು ಗಮನ ಸೆಳೆದರು.

RELATED ARTICLES

Latest News