ಬೆಂಗಳೂರು, ಡಿ.18- ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಆಹ್ವಾನ ನೀಡಲಾಗಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಮಂದಿರದ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಸಮಾರಂಭಕ್ಕೆ ಆಗಮಿಸುವಂತೆ ದೇವೇಗೌಡ ಅವರಿಗೆ ಅಧಿಕೃತವಾಗಿ ನಿನ್ನೆ ಆಹ್ವಾನ ನೀಡಲಾಗಿದೆ.
ಭೇಟಿಗೆ ಸಮಯ ಕೊಡದ ಪ್ರಧಾನಿ, ಸಿಎಂ ಸಿದ್ದರಾಮಯ್ಯಆಕ್ರೋಶ
ರಾಮಮಂದಿರ ಸಂಕೀರ್ಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಆರ್‍ಎಸ್‍ಎಸ್‍ನ ಹಿರಿಯ ನಾಯಕ ರಾಮ್‍ಲಾಲ್ ಮತ್ತು ವಿಎಚ್‍ಪಿಯ ಹಿರಿಯ ನಾಯಕ ಅಲೋಕ್ ಕುಮಾರ್ ಅವರು ನವದೆಹಲಿಯ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾಗಿ ಅಧಿಕೃತ ಆಹ್ವಾನ ಪತ್ರ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ತಮಗೆ ಆಹ್ವಾನ ನೀಡಿರುವುದು ಖುಷಿ ತಂದಿದೆ ಎಂದು ದೇವೇಗೌಡರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.