Sunday, May 5, 2024
Homeರಾಷ್ಟ್ರೀಯರಾಷ್ಟ್ರಪತಿಗಳಿಂದ 5 ದಿನಗಳ ತೆಲಂಗಾಣ ಪ್ರವಾಸ

ರಾಷ್ಟ್ರಪತಿಗಳಿಂದ 5 ದಿನಗಳ ತೆಲಂಗಾಣ ಪ್ರವಾಸ

ಹೈದರಾಬಾದ್, ಡಿ.18 (ಪಿಟಿಐ) ಐದು ದಿನಗಳ ಪ್ರವಾಸದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ತೆಲಂಗಾಣಕ್ಕೆ ಬಂದಿಳಿಯಲಿದ್ದಾರೆ. ರಾಷ್ಟ್ರಪತಿಗಳು ಪಶ್ಚಿಮ ಬಂಗಾಳದ ಐಐಟಿ ಖರಗ್‍ಪುರದ 69 ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಸಿಕಂದರಾಬಾದ್‍ನ ರಾಷ್ಟ್ರಪತಿ ನಿಲಯಕ್ಕೆ ಆಗಮಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ನಾಳೆ ಮುರ್ಮು ಅವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ಸೊಸೈಟಿಯ ಶತಮಾನೋತ್ಸವ ಆಚರಣೆಯನ್ನು ಅಲಂಕರಿಸಲಿದ್ದಾರೆ.ಅವರು ಡಿ. 20 ರಂದು ತೆಲಂಗಾಣದ ಪೋಚಂಪಲ್ಲಿಯಲ್ಲಿರುವ ಕೈಮಗ್ಗ ಮತ್ತು ನೂಲುವ ಘಟಕ ಹಾಗೂ ಜವಳಿ ಸಚಿವಾಲಯದ ಥೀಮ್ ಪೆವಿಲಿಯನ್‍ಗೆ ಭೇಟಿ ನೀಡಲಿದ್ದಾರೆ. ಅವರು ಈ ಸಂದರ್ಭದಲ್ಲಿ ನೇಕಾರರೊಂದಿಗೆ ಸಂವಾದ ನಡೆಸಲಿದ್ದಾರೆ.

ಅದೇ ದಿನ ಅವರು ಸಿಕಂದರಾಬಾದ್‍ನ ಎಂಎನ್‍ಆರ್ ಎಜುಕೇಶನಲ್ ಟ್ರಸ್ಟ್‍ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಡಿ. 21 ರಂದು ರಾಷ್ಟ್ರಪತಿ ನಿಲಯದಲ್ಲಿ ಮುರ್ಮು ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಹೈಫೈ ಸೌಲಭ್ಯ ಹೊಂದಿರುವ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

ಡಿ. 22 ರಂದು ರಾಜ್ಯದ ಪ್ರಮುಖ ನಾಗರಿಕರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಗಣ್ಯರಿಗೆ ರಾಷ್ಟ್ರಪತಿ ನಿಲಯಂನಲ್ಲಿ ಅಟ್ ಹೋಮïಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ನಗರ ಪೊಲೀಸರು ಸಂಚಾರ ನಿರ್ಬಂಧ ಹೇರಲಾಗಿದೆ. ನಗರದ ಬೊಲಾರಂನಲ್ಲಿ ನೆಲೆಗೊಂಡಿರುವ ರಾಷ್ಟ್ರಪತಿ ನಿಲಯಂ ಕಟ್ಟಡವನ್ನು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹೈದರಾಬಾದ್ ನಿಜಾಮರಿಂದ ವಶಪಡಿಸಿಕೊಳ್ಳಲಾಯಿತು ಮತ್ತು ಅದನ್ನು ರಾಷ್ಟ್ರಪತಿಗಳ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.

1860 ರಲ್ಲಿ ನಿರ್ಮಿಸಲಾದ ಈ ಕಟ್ಟಡವು ಒಟ್ಟು 90 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಒಂದೇ ಅಂತಸ್ತಿನ ಕಟ್ಟಡ, ಇದು 11 ಕೊಠಡಿಗಳನ್ನು ಒಳಗೊಂಡಿದೆ. ಇದು ಡೈನಿಂಗ್ ಹಾಲ್, ಸಿನಿಮಾ ಹಾಲ್, ದರ್ಬಾರ್ ಹಾಲ್ ಮತ್ತು ಡೈನಿಂಗ್ ರೂಮ್ ಅನ್ನು ಸಹ ಹೊಂದಿದೆ.

RELATED ARTICLES

Latest News