Thursday, November 21, 2024
Homeರಾಜ್ಯಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಲೇ ಇದೆ ಭಕ್ತ ಸಾಗರ

ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಲೇ ಇದೆ ಭಕ್ತ ಸಾಗರ

devotees continues to flow to Hasanamba Darshan

ಹಾಸನ, ಅ.30– ನಗರದ ಅದಿದೇವತೆ ಹಾಸನಾಂಬೆಯ ದರ್ಶನಕ್ಕೆ ಸಾಗರೋತ್ಪಾದಿಯಲ್ಲಿ ಭಕ್ತರ ಸಂಖ್ಯೆ ಆಗಮಿಸುತ್ತಲೇ ಇದ್ದು, ದೇವಿಯ ದರ್ಶನಕ್ಕಾಗಿ ಕಿಲೋಮೀಟರ್ಗಟ್ಟಲೆ ಸರತಿ ಸಾಲು ನಿಂತಿದ್ದು ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.

ಹಾಸನ ದೇವಿ ಸಾರ್ವಜನಿಕ ದರ್ಶನಕ್ಕೆ ಆರನೇ ದಿನ ಬಾರಿ ಸಂಖ್ಯೆಯಲ್ಲಿ ಬಂದಿರುವ ಭಕ್ತರು ಮುಂಜಾನೆಯಿಂದಲೂ ದೇವಿ ದರ್ಶನ ಪಡೆಯುತ್ತಿರುವ ಭಕ್ತರು ಕಿಲೋಮೀಟರ್ಗಟ್ಟಲೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತಿರುವ ಸಾವಿರಾರು ಭಕ್ತರು ಪ್ರವೇಶದ್ವಾರದ ಬಳಿ ಜಮಾಯಿಸಿರುವ ಸಾವಿರಾರು ಭಕ್ತರು 1000, 300, ವಿವಿಐಪಿ ವಿಶೇಷ ದರ್ಶನದ ಸಾಲುಗಳಲ್ಲಿ ಸಂಪೂರ್ಣ ಜನಜಂಗುಳಿ ಭಕ್ತರನ್ನು ನಿಯಂತ್ರಿಸಲು ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರ ಹರಸಾಹಸ ನಗರಸಭೆ ಎದುರಿಗಿರುವ ಬಿ.ಎಂ.ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಪರದಾಡುವಂತಾಗಿದೆ.

ಸಂಚರಿಸಲು ಪರದಾಡುತ್ತಿರುವ ವಾಹನ ಸವಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಭಕ್ತರು ಭಕ್ತರಿಂದ ತುಂಬಿ ತುಳುಕುತ್ತಿರುವ ಧರ್ಮ ದರ್ಶನದ ಸಾಲುಗಳು ಗಂಟೆಗಟ್ಟಲೆ ನಿಂತು ದರ್ಶನ ಪಡೆಯುತ್ತಿರುವ ಭಕ್ತರು ಬಾರಿ ಸಂಖ್ಯೆಯಲ್ಲಿ ಬಂದ ಹಿನ್ನೆಲೆಯಲ್ಲಿ ದೇವಿ ದರ್ಶನ ವಿಳಂಬ ಹಾಸನಾಂಬೆ ದೇವಿ ದರ್ಶನ ಪಡೆದ ತುಕಾಲಿ ಸಂತೋಷ್ ಹಾಗೂ ಪ್ರಥಮ್ ಹಾಸನಾಂಬೆ ದೇವಿ ದರ್ಶನ ಪಡೆದು ಸಂತಸಪಟ್ಟ ಪ್ರಥಮ್ ಹಾಗೂ ಸಂತೋಷ್ ದೇವಿಯ ದರ್ಶನ ಪಡೆದಿದ್ದಾರೆ.ವಿಶೇಷ ದರ್ಶನದ ಟಿಕೇಟ್ ಹಾಗೂ ಲಾಡು ಮಾರಾಟದಿಂದ ದೇವಾಲಯಕ್ಕೆ ಕೋಟಿ- ಕೋಟಿ ಆದಾಯ ಬರುತ್ತಲೇ ಇದೆ.

ಇಂದು ಬೆಳಗ್ಗೆ 8 ಗಂಟೆಯವರೆಗೂ 300 ರೂ. ವಿಶೇಷ ದರ್ಶನದ ಟಿಕೇಟ್ಗಳನ್ನು ಪಡೆದು 38,530 ಜನರು ದರ್ಶನ ಪಡೆದಿದ್ದಾರೆ. ಇದರಿಂದ 1,15,59,000 ರೂ. ಸಂಗ್ರಹವಾದರೂ ಸಾವಿರ ರೂ. ದರ್ಶನದ ಟಿಕೇಟ್ ಪಡೆದು 40925 ಜನರು ದರ್ಶನ ಪಡೆದಿದ್ದಾರೆ. ಇದರಿಂದ 4,09,25,000 ರೂ. ಸಂಗ್ರಹವಾಗಿದೆ.ಲಾಡು ಪ್ರಸಾದ ಮಾರಾಟದಿಂದ 41,26,800 ರೂ. ಸಂಗ್ರಹವಾಗಿದೆ. ಒಟ್ಟು ನಿನ್ನೆ ರಾತ್ರಿ 7 ಗಂಟೆಯವರೆಗೂ 5,66,10,800 ರೂ. ಆದಾಯ ಸಂಗ್ರಹವಾಗಿದೆ.

ದೇವಿಯ ದರ್ಶನ ವೇಳೆ ವಾಗ್ವಾದ:
ಹಾಸನಾಂಬೆ ದೇವಿ ದರ್ಶನೋತ್ಸವ ವೇಳೆ ಪೊಲೀಸ್ ಮತ್ತು ಜಿಲ್ಲಾಧಿಕಾರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.ಶಿಷ್ಟಾಚಾರದ ವಾಹನ ತಡೆದಿದ್ದಕ್ಕೆ ಡಿಸಿ ಅವರ ಪಿಎ ಶಶಿ ಹಾಗೂ ಸಬ್ಇನ್‌್ಸಪೆಕ್ಟರ್ ನಡುವೆ ನಡೆದಿದ್ದ ಮಾರಾಮಾರಿ ವೇಳೆ ಶಶಿ ಅವರನ್ನು ಪೊಲೀಸರು ಹೊರಗೆ ತಳ್ಳಿದ ಆರೋಪ ಕೇಳಿಬಂದಿದೆ.

RELATED ARTICLES

Latest News