Thursday, September 18, 2025
Homeಮನರಂಜನೆನಾಳೆ ಧೀರ ಭಗತ್ ರಾಯ್ ಲಿರಿಕಲ್ ವಿಡಿಯೋ ಲಾಂಚ್

ನಾಳೆ ಧೀರ ಭಗತ್ ರಾಯ್ ಲಿರಿಕಲ್ ವಿಡಿಯೋ ಲಾಂಚ್

ಸ್ಯಾಂಡಲ್ ವುಡ್‌ಗೆ ಹೊಸಬರ ಆಗಮನ ಹೊಸದೇನಲ್ಲ ಪ್ರತಿ ಬಾರಿಯೂ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾನೆ ಇರ್ತಾರೆ. ಇದೀಗ ಅದೇ ಭರವಸೆಯೊಂದಿಗೆ ಯುವ ಉತ್ಸಾಹಿ ಸಿನಿಮಾ ತಂಡವೊಂದು ಎಂಟ್ರಿ ಕೊಟ್ಟಿದೆ. ಎಂಟು ವರ್ಷಗಳ ಕಾಲ ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಕರ್ಣನ್ ಎಸ್ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿನಿಮಾ ಧೀರ ಭಗತ್ ರಾಯ್ ನಾಳೆ ಮಧ್ಯಾಹ್ನ 2 ಗಂಟೆಗೆ ನಗರದ ಎಚ್ಎಸ್ಆರ್ ಲೇಔಟ್ ನ ವೈಟ್ ಲೋಟಸ್ ಕ್ಲಬ್‌ನಲ್ಲಿ, ‘ಏನು ಕರ್ಮ’ ಸಾಹಿತ್ಯ ಇರುವ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.ವೈಟ್ ಲೋಟಸ್ ಎಂಟರ್‌ಟೈನ್‌ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟರ್‌ಟೈನರ್ಸ್ ಅಡಿಯಲ್ಲಿ ಪ್ರವೀಣ್ ಗೌಡ ಹಗಡೂರು ಮತ್ತು ಶ್ರೀನಾಥ್ ಪಾಟೀಲ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಾಳೆ ಬಿಡುಗಡೆ ಯಾವತ್ತಿರುವ ಹಾಡಿಗೆ ವಿಜಯ್ ಪ್ರಕಾಶ್, ಮತ್ತು ಸಾಕ್ಷಿ ಕಲ್ಲೂರ್ ದುನಿಯಾಗಿದ್ದಾರೆ. ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯ ಸಂಯೋಜನೆ ಮಾಡಿರುವುದು ಪೂರ್ಣ ಚಂದ್ರ ತೇಜಸ್ವಿ.

ಆಕ್ಷನ್ ಪೊಲಿಟಿಕಲ್ ಡ್ರಾಮಾ ಧೀರ ಭಗತ್ ರಾಯ್ ಸಿನಿಮಾದಲ್ಲಿ ರಾಕೇಶ್ ದಳವಾಯಿ ಹೀರೋ ಆಗಿ ನಟಿಸ್ತಿದ್ದು, ಸುಚರಿತ ಸಹಾಯರಾಜ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಶರತ್ ಲೋಹಿತಾಶ್ವ ವಿಲನ್ ಖದರ್ ನಲ್ಲಿ ಮಿಂಚಿದ್ದಾರೆ. ಉಳಿದಂತೆ ಪ್ರವೀಣ್ ಎಚ್.ಸಿ. ತ್ರಿವಿಕ್ರಮ್, ಮಠ ಕೊಪ್ಪಳ, ಸುಧಿ ರ್ ಕುಮಾರ್ ಮುರೊಳ್ಳಿ ಗೋವಿಂದ್, ಶಶಿಕುಮಾ‌ರ್, ಫಾರೂಕ್ ಅಹ್ಮದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಧೀರ ಭಗತ್ ರಾಯ್ ಸಿನಿಮಾದ ಟೀಸರ್ ಈಗಾಗಲೆ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿದೆ. ಅಧಿಕಾರಕ್ಕಾಗಿ ನಡೆಯುವ ಹೋರಾಟ, ಪ್ರೀತಿ-ಮಮತೆಯ ಸುತ್ತ ನಡೆಯುವ ಬಾಂಧವ್ಯದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡವ ಪ್ರಯತ್ನ ನಡೆದಿದೆ

RELATED ARTICLES

Latest News