Sunday, April 28, 2024
Homeರಾಜ್ಯತೆರಿಗೆ ತಾರತಮ್ಯದ ವಿರುದ್ಧ ಧ್ವನಿ ಎತ್ತದಿರುವುದು 7 ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯ ; ಸಿಎಂ

ತೆರಿಗೆ ತಾರತಮ್ಯದ ವಿರುದ್ಧ ಧ್ವನಿ ಎತ್ತದಿರುವುದು 7 ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯ ; ಸಿಎಂ

ಬೆಂಗಳೂರು,ಫೆ.20- ಕೇಂದ್ರದಿಂದಾಗುತ್ತಿರುವ ಆರ್ಥಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತದೇ ಇರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಮಾಡಿದ ಭಾಷಣದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿಯವರು, ತಮ್ಮ ಸರ್ಕಾರ ಆಡಳಿತಕ್ಕೆ ಬಂದು ಇಂದಿಗೆ 9 ತಿಂಗಳಾಗಿವೆ. ರಾಜ್ಯಪಾಲರು ಸರ್ಕಾರದ ನಿಲುವು, ಮುನ್ನೋಟ, ನೀತಿಯನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರಪರಿಸ್ಥಿತಿ ಇದೆ. ಪರಿಹಾರ ನೀಡಿ ಎಂದು ನಾನು ಖುದ್ದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‍ಷಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ರಾಜ್ಯಸರ್ಕಾರದಿಂದ 17 ಬಾರಿ ಪತ್ರ ಬರೆದಿದ್ದೇವೆ. ಒಂದು ಬಾರಿ ಮಾತ್ರ ಅಮಿತ್ ಷಾ ನಿಮ್ಮ ಪತ್ರ ತಲುಪಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಉಳಿದ 16 ಪತ್ರಗಳನ್ನು ಕಡೆಗಣಿಸಿದ್ದಾರೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕೆ ಎಂದು ಪ್ರಶ್ನಿಸಿದರು.

ರಾಹುಲ್ ಸಲಹೆ ಮೇರೆಗೆ ಕೇರಳದ ಕುಟುಂಬಕ್ಕೆ ಕರ್ನಾಟಕ ಪರಿಹಾರ; ವಿಜಯೇಂದ್ರ ಖಂಡನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಪ್ರಮಾಣವನ್ನು 100 ರಿಂದ 150 ಕ್ಕೆ ಹೆಚ್ಚಿಸುವಂತೆ ಮನವಿ ಕೊಟ್ಟಿದ್ದಾರೆ. ಕಂದಾಯ ಸಚಿವರೂ ಹಲವು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ ಯಾವುದಕ್ಕೂ ಕೇಂದ್ರ ಸ್ಪಂದಿಸಿಲ್ಲ. ಮೊದಲ ಬಾರಿಗೆ 2023 ರ ಅಕ್ಟೋಬರ್ 20 ರಂದು ಬರ ನಿರ್ವಹಣೆಗೆ ನೆರವು ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಜಿ.ಟಿ.ದೇವೇಗೌಡ

4 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ನವೆಂಬರ್ 16 ರಂದು ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಲೂ ಕೇಂದ್ರದಿಂದ ಉತ್ತರ ಇಲ್ಲ. ಈ ಅನ್ಯಾಯವನ್ನು ಬಿಜೆಪಿಯವರಂತೂ ಕೇಳುತ್ತಿಲ್ಲ. ನಾವೂ ಕೇಳಬಾರದೆ ಎಂದು ಪ್ರಶ್ನಿಸಿದರು. ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದಿಂದ ಸಂಘರ್ಷ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಇಡೀ ಸದನ ಒಟ್ಟಾಗಿ ನ್ಯಾಯ ಕೇಳಬೇಕಿದೆ. ನಾವು ಯಾರ ಜೊತೆಯೂ ಸಂಘರ್ಷ ಮಾಡುತ್ತಿಲ್ಲ. ನಮಗೆ ದೊರೆಯಬೇಕಾದ ಪಾಲಿನ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

RELATED ARTICLES

Latest News