Friday, May 3, 2024
Homeರಾಜ್ಯಅಡ್ಜೆಸ್ಟ್‍ಮೆಂಟ್ ಗಿರಾಕಿಗಳಿಂದಾ ಪಕ್ಷಕ್ಕೆ ಸೋಲಾಗಿದೆ : ಯತ್ನಾಳ್

ಅಡ್ಜೆಸ್ಟ್‍ಮೆಂಟ್ ಗಿರಾಕಿಗಳಿಂದಾ ಪಕ್ಷಕ್ಕೆ ಸೋಲಾಗಿದೆ : ಯತ್ನಾಳ್

ಬೆಂಗಳೂರು,ಫೆ.20- ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಅಡ್ಜೆಸ್ಟ್‍ಮೆಂಟ್ ಗಿರಾಕಿಗಳಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರ ನೀಡುವಾಗ ಚುನಾವಣಾ ಫಲಿತಾಂಶಗಳ ಬಗ್ಗೆ ಚರ್ಚೆಯಾಯಿತು. ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟು ಆಯ್ಕೆ ಮಾಡಿದ್ದಾರೆ.

ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯವರು ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ರಾಜ್ಯಕ್ಕೆ ಕರೆತಂದು ಗೆಲ್ಲಿಸುತ್ತಿದ್ದರು. ಲೆಕ್ಕವಿಲ್ಲದಷ್ಟು ಸಭೆಗಳು, ರೋಡ್ ಶೋ ಮಾಡಿಸಿದರು. ಆದರೂ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದಾಗ, 2018 ರಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗಲೂ ಜನ ತಿರಸ್ಕಾರ ಮಾಡಿದರು. ಲೋಕಸಭೆಯಲ್ಲಿ ನಿಮಗೆ ವಿರೋಧಪಕ್ಷದ ಮಾನ್ಯತೆ ಗಳಿಸುವಷ್ಟು ಸ್ಥಾನಗಳು ಸಿಕ್ಕಿಲ್ಲ ಎಂದು ಆರ್.ಅಶೋಕ್ ಕಿಚಾಯಿಸಿದರು.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಜಿ.ಟಿ.ದೇವೇಗೌಡ

2018 ರ ಸೋಲನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ. ಈಗಿನ ಸೋಲನ್ನು ಒಪ್ಪಿಕೊಳ್ಳುವ ಉದಾರತೆಯನ್ನು ಬಿಜೆಪಿ ಪ್ರದರ್ಶಿಸಬೇಕು ಎಂದು ಸಿದ್ದರಾಮಯ್ಯ ತಿಳಿ ಹೇಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ ಯತ್ನಾಳ್, ಬಸವರಾಜ ಬೊಮ್ಮಾಯಿ ಮಾಡಿದ ಕೆಲಸವನ್ನು ನಮ್ಮ ಪಕ್ಷದ ಬಿಜೆಪಿ ನಾಯಕರು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಳು ಮಾಡಿದರು. ಚುನಾವಣೆ ಸೋಲಿಗೆ ಬೊಮ್ಮಾಯಿ ಆಗಲೀ, ಮೋದಿಯಾಗಲೀ ಕಾರಣ ಅಲ್ಲ ಅಡ್ಜೆಸ್ಟ್‍ಮೆಂಟ್ ಗಿರಾಕಿಗಳು ಕಾರಣ ಎಂದು ಕಿಡಿಕಾರಿದರು.

ಹೊಂದಾಣಿಕೆ ಯಾರು ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಹೆಸರು ಉಲ್ಲೇಖಿಸಬೇಕು. ಪ್ರತಿಬಾರಿಯೂ ಹೇಳಿದ್ದನ್ನೇ ಹೇಳಿ ಗೌಪ್ಯವಾಗಿಡಬಾರದು ಎಂದು ತರಾಟೆಗೆ ತೆಗೆದುಕೊಂಡಾಗ ಈಗಾಗಲೇ ನಾನು ಮಾಧ್ಯಮಗಳ ಮೂಲಕ ಘಂಟಾಘೋಷವಾಗಿ ಸತ್ಯ ಹೇಳಿದ್ದೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ವಂಶ ವಾದ ಹಾಗೂ ಭ್ರಷ್ಟಾಚಾರದ ಆಡಳಿತವನ್ನು ಕಿತ್ತು ಹಾಕುತ್ತಾರೆ ಎಂದು ಹೇಳಿದರು.

RELATED ARTICLES

Latest News