Saturday, October 19, 2024
Homeಮನರಂಜನೆಈ ವಾರ ತೆರೆಗೆ ಬರುತ್ತಿದೆ ಬಿಗ್ ಬಜೆಟ್ ಸಿನಿಮಾ 'ಮಾರ್ಟಿನ್'

ಈ ವಾರ ತೆರೆಗೆ ಬರುತ್ತಿದೆ ಬಿಗ್ ಬಜೆಟ್ ಸಿನಿಮಾ ‘ಮಾರ್ಟಿನ್’

Dhruva Sarja-starrer Martin movie releasing this week

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ನಾಳೆ ಪ್ರಪಂಚದಾದ್ಯಂತ ಪ್ರೇಕ್ಷಕರ ಮುಂದೆ ಬರುತ್ತಿದೆ. ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ ಬಿಡುಗಡೆಯ ಕುರಿತಾಗಿ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ಮಾರ್ಟಿನ್, ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆಯಿಟ್ಟು ಇಷ್ಟು ದುಡ್ಡನ್ನು ಹಾಕಿದ್ದಾರೆ. ನಮ್ಮ ಮಾವ ಅರ್ಜುನ್ ಸರ್ಜಾ ಅವರು ಉತ್ತಮ ಕಥೆ ಮಾಡಿ ಕೊಟ್ಟಿದಾರೆ, ಪ್ರತಿಯೊಬ್ಬ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಮಾರ್ಟಿನ್‌ಉತ್ತಮವಾಗಿ ಮೂಡಿಬಂದಿದೆ.

ನಮ್ಮ ಮಾರ್ಟಿನ್ ಭಾರತದಾದ್ಯಂತ ಸುಮಾರು 3000 ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಮಾತನಾಡಿದ ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

Dhruva Sarja-starrer Martin movie Release

ನಟಿ ವೈಭವಿ ಶಾಂಡಿಲ್ಯ ಮತ್ತು ನಟ ಚಿಕ್ಕಣ್ಣ ಸಿನಿಮಾ ಗೆಲುವಿನ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಸತ್ಯ ಹೆಗ್ಡೆ, ನೃತ್ಯ ನಿರ್ದೇಶಕರಾದ ಮುರಳಿ, ಇಮ್ರಾನ್ ಸರ್ದಾರಿಯಾ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಣಿ ಶರ್ಮ ಸಂಗೀತ ನಿರ್ದೇಶನ, ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

RELATED ARTICLES

Latest News