Saturday, September 23, 2023
Homeಇದೀಗ ಬಂದ ಸುದ್ದಿರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI

ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI

- Advertisement -

ನವದೆಹಲಿ, ಆ.10- ಈ ಬಾರಿಯೂ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಘೋಷಿಸಿದೆ.ಇದರೊಂದಿಗೆ ಗೃಹ, ವಾಹನಗಳ ಸಾಲಗಳ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.ಶೇ.6.5ರ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಮಧ್ಯಮ ವರ್ಗದ ಸಾಲ ಪಾವತಿದಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.

- Advertisement -

ಆರ್‍ಬಿಐನ ಬಡ್ಡಿದರ ಶೇ. 6.50ರಲ್ಲೇ ಮುಂದುವರಿಯಲಿದೆ. ಆಗಸ್ಟ್ 8ರಿಂದ ನಡೆದಿದ್ದ ರಿಸರ್ವ್ ಬ್ಯಾಂಕ್‍ನ ಹಣಕಾಸು ನೀತಿ ಸಮಿತಿ (ಮಾನಿಟರಿ ಪಾಲಿಸಿ ಕಮಿಟಿ) ಸಭೆ ಮುಕ್ತಾಯಗೊಂಡ ಬೆನ್ನಲ್ಲೇ ಅದರ ಗವರ್ನರ್ ಶಕ್ತಿಕಾಂತ ದಾಸ್ ಆ ಸಭೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.ದೇಶದಲ್ಲಿನ ಹಣದುಬ್ಬರ ಸ್ಥಿತಿಯನ್ನು ಆರ್‍ಬಿಐ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಣದುಬ್ಬರ ಇಳಿಕೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಏತನ್ಮಧ್ಯೆ ಟೊಮ್ಯಾಟೊ, ಗೋ, ಅಕ್ಕಿಯ ಬೆಲೆ ಭಾರೀ ಹೆಚ್ಚಳವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್, ರಿವರ್ಸ್ ರೆಪೋ ಇತ್ಯಾದಿ ಇತರ ದರಗಳಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು.. ಹಾಗೆಯೇ, ಹಣದುಬ್ಬರ ಶೇ. 5.625ರಷ್ಟು ಇರಬಹುದು ಎಂಬುದು ಅವರ ಅಂದಾಜು ಮಾಡಲಾಗಿದೆ ಎಂದು ಹೇಳಿದರು. ಇದೇ ರೀತಿ ಜುಲೈ 13-31ರ ನಡುವೆ 75 ಅರ್ಥಶಾಸ್ತ್ರಜ್ಞರ ರಾಯಿಟರ್ಸ್ ಸಮೀಕ್ಷೆಯಲ್ಲಿ ಕೇಂದ್ರೀಯ ಬ್ಯಾಂಕ್ ತನ್ನ ತನ್ನ ಆಗಸ್ಟ್ 10ರ ನೀತಿ ಸಭೆಯಲ್ಲಿ ರೆಪೋ ದರವನ್ನು ಶೇ. 6.50ರಲ್ಲೇ ಬದಲಾಗದೆ ಇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು.

ಕಾಶಿ ಯಾತ್ರೆಗೆ ಹೋಗುವವರಿಗೆ ಸರ್ಕಾರದಿಂದ ಖುಷಿ ಸುದ್ದಿ

ಹಣದುಬ್ಬರದ ಏರಿಕೆಯನ್ನು ನಿಯಂತ್ರಿಸಲು ಎಂಪಿಸಿಯು ರೆಪೋ ದರವನ್ನು ಮೇ 2022 ರಿಂದ ಫೆಬ್ರವರಿ 2023 ರವರೆಗೆ ಒಟ್ಟು 250 ಮೂಲ ಅಂಕಗಳಷ್ಟು ಅಥವಾ ಶೇ. 2.5ರಷ್ಟು ಹೆಚ್ಚಿಸಿದೆ.ಹಣದುಬ್ಬರವು ಮೇ ತಿಂಗಳಲ್ಲಿ 25 ತಿಂಗಳ ಕನಿಷ್ಠ ಮಟ್ಟವಾದ ಶೇ. 4.25ಕ್ಕೆ ಕುಸಿದ ನಂತರ ಜೂನ್ನಲ್ಲಿ ಇದೇ ಹಣದುಬ್ಬರ ಶೇ. 4.81ಕ್ಕೆ ಏರಿಕೆ ಕಂಡಿತ್ತು.ಹಣ್ಣುಗಳು ಮತ್ತು ತರಕಾರಿಗಳ ಬೆಲೆ ಏರಿಕೆಯೊಂದಿಗೆ ಹಣದುಬ್ಬರ ದರವು ಜುಲೈನಲ್ಲಿ ತೀವ್ರ ಏರಿಕೆ ಕಾಣುವ ಎಲ್ಲಾ ಸಾಧ್ಯತೆ ಇದೆ. ಆರ್‍ಬಿಐ ಹಣದುಬ್ಬರವನ್ನು ತನ್ನ ಸಹಿಷ್ಣುತೆಯ ಮಿತಿಯಾದ ಶೇ.2-6ರ ಒಳಗೆ ಉಳಿಸಿಕೊಳ್ಳಲು ಸತತವಾಗಿ ರೆಪೋ ದರವನ್ನು ಏರಿಕೆ ಮಾಡುತ್ತಾ ಬಂದಿತ್ತು.

ಆರ್‍ಬಿಐ ಬ್ಯಾಂಕ್‍ಗಳಿಗೆ ನೀಡುವ ಸಾಲಕ್ಕೆ ವಿಸುವ ಬಡ್ಡಿಯನ್ನು ರೆಪೋ ದರ ಎನ್ನಲಾಗುತ್ತದೆ. ಪ್ರಮುಖ ನೀತಿ ದರವಾದ ರೆಪೋ ದರವನ್ನು ಕೊನೆಯದಾಗಿ ಫೆಬ್ರವರಿ 2023 ರಲ್ಲಿ 25 ಮೂಲ ಅಂಕಗಳಷ್ಟು (ಬಿಪಿಎಸ್) ಹೆಚ್ಚಿಸಲಾಗಿತ್ತು. ಆರ್‍ಬಿಐ ಏಪ್ರಿಲ್ ಮತ್ತು ಜೂನ್ ಸಭೆಗಳಲ್ಲಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿತ್ತು.

ಏನಿದು ರೆಪೋ ದರ:
ರೆಪೋ ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಂದರೆ ಮರು ಖರೀದಿ ಆಯ್ಕೆ. ಬ್ಯಾಂಕುಗಳಿಗೆ ತುರ್ತು ಅಗತ್ಯಬಿದ್ದಾಗ ಅಥವಾ ಫಂಡಿಂಗ್ ಕೊರತೆ ಇದ್ದಾಗ ಆರ್‍ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‍ಬಿಐ ವಿಸುವ ಬಡ್ಡಿಯೇ ರೆಪೋ ದರ. ರೆಪೋ ದರವನ್ನು ಆರ್‍ಬಿಐನ ಬಡ್ಡಿದರ ಎಂದೂ ಕರೆಯಲಾಗುತ್ತದೆ. ಇನ್ನು, ರಿವರ್ಸ್ ರಿಪೋ ಎಂಬುದು ಇದರ ತಿರುವುಮುರುವು. ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಬೇಕಾದರೆ ಆರ್‍ಬಿಐನಲ್ಲಿ ಠೇವಣಿಯಾಗಿ ಇರಿಸಬಹುದು. ಇದಕ್ಕೆ ಆರ್‍ಬಿಐ ನೀಡುವ ಬಡ್ಡಿದರವೇ ರಿವರ್ಸ್ ರೆಪೋ.

ಆರ್‍ಬಿಐ ಬಡ್ಡಿದರ ಹೆಚ್ಚಿಸಿದರೆ ಬ್ಯಾಂಕುಗಳು ಅದಕ್ಕೆ ಅನುಗುಣವಾಗಿ ತಮ್ಮ ಗ್ರಾಹಕರಿಗೆ ಅದರ ಲಾಭ ಅಥವಾ ನಷ್ಟವನ್ನು ವರ್ಗಾಯಿಸಬಹುದು. ಆದರೆ, ಅದು ಬ್ಯಾಂಕುಗಳ ಆಯ್ಕೆ.
ಆರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪ್ರಕಾರ, ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ (2023-24) ಸಿಪಿಐ ಹಣದುಬ್ಬರ ಶೇ. 5.5 ಆಗಬಹುದು. ಕಳೆದ ಬಾರಿ ನಡೆದಿದ್ದ ಸಭೆಯಲ್ಲಿ ಮಾಡಲಾಗಿದ್ದ ಅಂದಾಜು ಪ್ರಕಾರ ಈ ಹಣಕಾಸುವ ವರ್ಷದಲ್ಲಿ ಹಣದುಬ್ಬರ ಶೇ. 5.1ರಷ್ಟು ಇರಬಹುದು ಎನ್ನಲಾಗಿತ್ತು.

ಈಗ ಅಂದಾಜನ್ನು ಪರಿಷ್ಕರಿಸಿ, ಹಣದುಬ್ಬರ ಇನ್ನಷ್ಟು ಏರಿಕೆಯನ್ನು ಆರ್‍ಬಿಐ ನಿರೀಕ್ಷಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ (2024-25) ಹಣದುಬ್ಬರ ಶೇ. 5.2ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ಆಂದಾಜು ಮಾಡಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಗರಿಷ್ಠ ದರದಲ್ಲಿ ಬೆಳೆದರೆ ಕೊನೆಯ ಕ್ವಾರ್ಟರ್ ತುಸು ದುರ್ಬಲ ಬೆಳವಣಿಗೆ ಕಾಣಲಿದೆ.

#RBI, #PolicyMeeting, #reporate #unchanged, #inflationforecast, #raised,

- Advertisement -
RELATED ARTICLES
- Advertisment -

Most Popular