Saturday, May 18, 2024
Homeರಾಷ್ಟ್ರೀಯನ.1ರಿಂದ ದೆಹಲಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧ

ನ.1ರಿಂದ ದೆಹಲಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧ

ನವದೆಹಲಿ,ಅ.22- ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದ ಕಾರಣ ನವೆಂಬರ್ 1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬಸ್ಸುಗಳ ಸಂಚಾರವನ್ನು ನಿಷೇಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ನಿಂದ ಫೆಬ್ರವರಿವರೆಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯವು ಅತಿ ಹೆಚ್ಚಿರುತ್ತದೆ.

ಇದನ್ನು ತಡೆಯಲು ಕಾರ್ಖಾನೆಗಳನ್ನು ಮುಚ್ಚುವುದು, ಸಮ-ಬೆಸ ರೀತಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುವುದು, ಹೆಚ್ಚು ಮಾಲಿನ್ಯವನ್ನು ಹೊರಸೂಸುವ ವಾಹನಗಳನ್ನು ನಿಷೇಸುವುದು, ಪಟಾಕಿ ಸಿಡಿಸದಂತೆ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಅವು ತಾತ್ಕಾಲಿಕ ಕ್ರಮಗಳಾಗುತ್ತಿವೆ. ಇತ್ತೀಚೆಗೆ ಈ ವರ್ಷವೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದರೂ ವಾಯುಮಾಲಿನ್ಯ ತಗ್ಗದೆ ಮಿತಿಮೀರುತ್ತಲೇ ಇದೆ.

ಅಪಾಯಕಾರಿ ಆಟವಾಡುತ್ತಿದೆ ಹಿಜ್ಬುಲ್ಲಾ ಸಂಘಟನೆ : ಇಸ್ರೇಲ್

ಹೀಗಾಗಿ ನವೆಂಬರ್ 1ರಿಂದ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಡೀಸೆಲ್ ಚಾಲಿತ ಬಸ್ಗಳನ್ನು ಓಡಿಸಲು ಅನುಮತಿಸುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಘೋಷಿಸಿದೆ.ಡೀಸೆಲ್ ಬಸ್ಗಳನ್ನು ಸ್ಥಗಿತಗೊಳಿಸಿ ಎಲೆಕ್ಟ್ರಿಕ್, ಸಿಎನ್ಜಿ ಮತ್ತು ಬಿಎಸ್ 6 ಡೀಸೆಲ್ ಬಸ್ಗಳಿಗೆ ಮಾತ್ರ ಅನುಮತಿಸಲಾಗುವುದು. ಜೊತೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಸುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಕೋರಿದೆ.

ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ನಿನ್ನೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪರಿಸರ ಸಚಿವರೊಂದಿಗೆ ದೀಪಾವಳಿ ಸಮಯದಲ್ಲಿ ವಾಯುಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಸಭೆ ನಡೆಸಿದ್ದರು. ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುತ್ತದೆ. ಎನ್ಸಿಆರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಆಯಾ ರಾಜ್ಯಗಳು ಜಂಟಿ ಕ್ರಮವನ್ನು ಸಿದ್ಧಪಡಿಸಬೇಕು ಸೂಚಿಸಲಾಗಿದೆ.

ಪಟಾಕಿ ಸಿಡಿಸುವುದನ್ನು, ತ್ಯಾಜ್ಯ ಸುಡುವುದನ್ನು ಸಂಪೂರ್ಣವಾಗಿ ನಿಷೇಸಬೇಕು. ಸಿಎನ್ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸಬೇಕು. ಕಾರ್ಖಾನೆಗಳಲ್ಲಿ ಮಾಲಿನ್ಯಕಾರಕ ಇಂಧನಗಳನ್ನು ಸಂಸ್ಕರಿಸಿದ ನೈಸರ್ಗಿಕ ಅನಿಲವನ್ನಾಗಿ ಪರಿವರ್ತಿಸಲು, ಇಟ್ಟಿಗೆ ಗೂಡುಗಳ ಮಾಲಿನ್ಯವನ್ನು ನಿಯಂತ್ರಿಸಲು ಜಿಗ್ಜಾಗ್ ತಂತ್ರಜ್ಞಾನವನ್ನು ಬಳಸಲು, ಎನ್ಸಿಆರ್ನ ಎಲ್ಲಾ ಪ್ರದೇಶಗಳಲ್ಲಿ ಡೀಸೆಲ್ ಜನರೇಟರ್ಗಳನ್ನು ಅವಲಂಬಿಸದೆ ವಿದ್ಯುತ್ ಲಭ್ಯವಾಗುವಂತೆ ಮಾಡಲು ದೆಹಲಿ ಸಚಿವ ಗೋಪಾಲ್ ರಾಯ್ ಕೇಳಿಕೊಂಡಿದ್ದಾರೆ.

ಆದರೆ ಸಿಎನ್ಜಿ, ಎಲೆಕ್ಟ್ರಿಕ್ ಮತ್ತು ಬಿಎಸ್ 6 ಬಸ್ಗಳು ಮಾತ್ರ ಓಡಬೇಕಾದರೆ, ಅವರ ಬಳಿ ಕೇವಲ 150 ವಾಹನಗಳಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ನ.1ರಿಂದ ಡೀಸೆಲ್ ಬಸ್ಗಳನ್ನು ಬಂದ್ ಮಾಡಿದರೆ ಸಮಸ್ಯೆಯಾಗಲಿದೆ ಎಂಬ ವಾದಗಳು ಕೇಳಿಬಂದಿವೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ 400 ಬಸ್ಗಳು ಸಂಚರಿಸುವ ಮಾರ್ಗಗಳಲ್ಲಿ ಕೇವಲ 150 ಬಸ್ಗಳು ಓಡಾಡಿದರೆ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News