Sunday, April 28, 2024
Homeರಾಜ್ಯಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಸಂಶೋಧನೆ ಅಗತ್ಯ : ಸಿಎಂ

ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಸಂಶೋಧನೆ ಅಗತ್ಯ : ಸಿಎಂ

ಬೆಂಗಳೂರು, ನ.9- ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯಿಂದ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನಗರದ ಯಲಹಂಕದಲ್ಲಿ ನಿರ್ಮಿಸಲಾಗಿರುವ ಪಿಲಿಪ್ಸ್‍ನ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸುಲಭ ವ್ಯವಹಾರಕ್ಕೆ ಪೂರಕ ವಾತವರಣ ಹೊಂದಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಬೆಂಗಳೂರಿನ ಪಿಲಿಪ್ಸ್ ಸಂಶೋಧನಾ ಕೇಂದ್ರ ಆರೋಗ್ಯ ಕ್ಷೇತ್ರದ ಡಿಜಿಟಲ್ ಶಕ್ತಿ ಕೇಂದ್ರವಾಗಿದೆ. ದೇಶದಲ್ಲೇ ಆರೋಗ್ಯ ಕಾಳಜಿಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಈ ಸಂಸ್ಥೆ, ಬೆಂಗಳೂರಿನಲ್ಲಿ 6.50 ಲಕ್ಷ ಚದುರ ಅಡಿ ಜಾಗದಲ್ಲಿ ಅಸ್ತಿತ್ವದಲ್ಲಿದ್ದು, ಐದು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಕಳೆದ 27 ವರ್ಷಗಳಿಂದಲೂ ಕರ್ನಾಟಕದಲ್ಲಿ ಪೂರಕ ವಾತಾವಣ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದರು.

ಜನರ ಆರೋಗ್ಯ ಹಾಗೂ ಕ್ಷೇಮಕ್ಕೆ ಡಿಜಿಟಲ್ ಪರಿವರ್ತನೆ ನೆರವಾಗಲಿದೆ. ರೋಗಿಗಳ ಅನುಭವ ಸುಧಾರಣೆ, ಉತ್ತಮ ಫಲಿತಾಂಶ, ವೆಚ್ಚ ತಗ್ಗಿಸುವಿಕೆ ವಲಯಗಳಲ್ಲಿ ಅನ್ವೇಷಣೆಗಳು ನಡೆಯಬೇಕಿದೆ. ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಬಯಾಲಾಜಿಕಲ್ ಸೈನ್ಸ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಹಲವು ವೈದ್ಯಕೀಯ ಸಂಸ್ಥೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನವೋದ್ಯಮಗಳಿಗೆ ಪೂರಕ ವಾತವರಣವೂ ಇದೆ. ಜೀವನ ಸುಧಾರಣೆ, ಡಿಜಿಟಲ್ ಆರೋಗ್ಯ, ಅಮೂಲ್ಯ ಔಷಧಿಗಳ ಸಂಶೋಧನೆ ಸೇರಿದಂತೆ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಹೃದಯಘಾತದಿಂದ ಬಚಾವ್ ಮಾಡಿದ ಸ್ಮಾರ್ಟ್ ವಾಚ್‍..!

ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ಸೇರಿದಂತೆ ಅನೇಕ ನೀತಿಗಳನ್ನು ಜಾರಿಗೆ ತರುವ ಮೂಲಕ ಆಧುನಿಕ ವಾತಾವರಣ ನಿರ್ಮಿಸಿದೆ. ದೇಶಿಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಗುರಿ ತಲುಪಲು ಗಮನ ನೀಡಿದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ. . 2022ರಲ್ಲಿ ದೇಶದಲ್ಲಿ ಸುಲಭ ವ್ಯವಹಾರಿಕ ವಾತಾವರಣದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಕಾಲಕಾಲಕ್ಕೆ ನೀತಿ, ನಿರೂಪಣೆಗಳ ಮೂಲಕ ಬೆಂಬಲ ಮುಂದುವರೆಸಲಾಗಿದೆ ಎಂದರು.

2023ರಲ್ಲಿ ನಡೆಯುವ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಯವರು ಉದ್ಯಮಿಗಳಿಗೆ ಕರೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News