Friday, January 23, 2026
Homeಜಿಲ್ಲಾ ಸುದ್ದಿಗಳುಮನ್ರೇಗಾ ಯೋಜನೆ ಮರು ನಾಮಕರಣದಿಂದಾಗುವ ಸಮಸ್ಯೆ ಕುರಿತು ಜನರಿಗೆ ಜಾಗೃತಿ ಮೂಡಿಸಿ : ವಿನಯ ಕುಮಾರ್‌...

ಮನ್ರೇಗಾ ಯೋಜನೆ ಮರು ನಾಮಕರಣದಿಂದಾಗುವ ಸಮಸ್ಯೆ ಕುರಿತು ಜನರಿಗೆ ಜಾಗೃತಿ ಮೂಡಿಸಿ : ವಿನಯ ಕುಮಾರ್‌ ಸೊರಕೆ

Create awareness among people about the problem of renaming of MNREGA scheme

ಹುಬ್ಬಳ್ಳಿ: ಇಂದು ಭಾರತೀಯ ಜನತಾ ಪಕ್ಷದ ಎನ್‌ಡಿಎ ಅತ್ಯಂತ ಕೆಟ್ಟ ಹಾಗೂ ಜನವಿರೋಧಿ ಆಡಳಿತ ನಡೆಸುತ್ತಿದ್ದು ತನ್ನ ಲಾಭಕ್ಕಾಗಿ ಮಹಾತ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಾವಣೆ ಮಾಡಿದೆ ಎಂದು ಇದರ ವಿರುದ್ಧ ಜನಾಂದೋಲನ ರೀತಿಯಲ್ಲಿ ಹೋರಾಟ ಅಗತ್ಯ ಇದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌‍ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ನಗರದ ಮಂತ್ರಾ ರೆಸಿಡೆನ್ಸಿ ಹೊಟೇಲ್‌ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಹಾಗೂ ಗ್ರಾಮೀಣ ಜಿಲ್ಲೆಗಳ ಪ್ರಚಾರ ಸಮಿತಿ ಸದಸ್ಯರಿಗೆ ಹಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ಬಹುತಮವಿದೆ ಎನ್ನುವ ಕಾರಣಕ್ಕೆ ಸಂವಿಧಾನಕ್ಕೆ ವಿರುದ್ಧವಾಗಿ ಮಸೂದೆಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ತಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾತಗಾಂಧೀ ಅವರ ಹೆಸರನ್ನು ಇತಿಹಾಸದಿಂದ ತೆಗೆದುಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.

ಹಿಂದಿನ ನಮ ಸರಕಾರ ದೇಶದ ಜನರ ಕಲ್ಯಾಣಕ್ಕಾಗಿ ತಂದಿದ್ದ 33 ಕಾರ್ಯ ಕ್ರಮಗಳನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದು ಮಾಡಿದೆ. ಇತ್ತೀಚೆಗೆ ಮನರೇಗಾ ಯೋಜನೆಯನ್ನು ರದ್ದು ಮಾಡಿ ಗ್ರಾಪಂಗಳ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡಿದ್ದಾರೆ. ಗ್ರಾಮಗಳ ಅಭಿವೃದ್ಧಿಯನ್ನು ದೆಹಲಿಯ ಕಾರ್ಪೋರೇಟ್‌ ಸಂಸ್ಥೆಗಳ ಕೈಗೆ ನೀಡಿದ್ದಾರೆ.

ನಾವು ಶೇ.95 ರಷ್ಟು ಕೆಲಸ ಮಾಡಿದರೂ ಶೇ. 5ರಷ್ಟು ಪ್ರಚಾರ ಪಡೆಯುವುದಿಲ್ಲ. ಆದರೆ ವಿಪಕ್ಷದವರು ಶೇ.5 ರಷ್ಟು ಕೆಲಸ ಮಾಡಿ ಶೇ.95 ರಷ್ಟು ಪ್ರಚಾರ ಪಡೆಯುತ್ತಾರೆ. ರಾಜ್ಯದಲ್ಲಿ ಪ್ರಚಾರ ಸಮಿತಿ ಅಡಿಯಲ್ಲಿ ಕನಿಷ್ಠ ಒಂದು ಲಕ್ಷ ಸದಸ್ಯರಾಗಬೇಕು ಎನ್ನುವ ಗುರಿಯಿದೆ. ಎಲ್ಲರೂ ಒಗ್ಗೂಡಿದಾಗ ಮಾತ್ರ ಜನದ್ರೋಹಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬಹುದಾಗಿದೆ ಎಂದರು.

ಮಾಜಿ ಸಂಸದ ಪೊ. ಐ.ಜಿ.ಸನದಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಸುಖ, ಶಾಂತಿ ನೆಲೆಸಿ ಜನ ಕಲ್ಯಾಣ ಕಾಂಗ್ರೆಸ್‌‍ ಪಕ್ಷದಿಂದ ಮಾತ್ರ ಸಾಧ್ಯ. ಸುಧೀರ್ಘ ಆಡಳಿತದಲ್ಲಿ ಸೋಲುವು ಗೆಲವು ಕಂಡಿದ್ದೇವೆ. ಹಿಂದೆ ಕಾಂಗ್ರೆಸ್‌‍ ಸೋತಾಗ ಮಾಜಿ ಪ್ರಧಾನಿ ಇಂದಿರಾಗಾಂಧೀ ಅವರು ಎಲ್ಲಾ ಜಿಲ್ಲೆಗಳ ಅಧ್ಯಕ್ಷರನ್ನು ದೆಹಲಿಗೆ ಕರೆಯಿಸಿ ರಾಜಕೀಯ ಪುನಶ್ಚೇತನ ಕಾರ್ಯಾಗಾರ ಮಾಡಿದ್ದರು. ಅಂತಹ ಕಾರ್ಯಾಗಾರಗಳು, ತರಬೇತಿಗಳು ಪಕ್ಷಕ್ಕೆ ಅಗತ್ಯವಿದೆ ಎಂದರು.

ಕೆಪಿಸಿಸಿ ಮುಖ್ಯ ಸಂಯೋಜಕ ಸುಧೀರಕುಮಾರ ಮುರೊಳ್ಳಿ ಮಾತನಾಡಿ
ನಮ ಸರಕಾರದ ಜನ ಕಲ್ಯಾಣ ಯೋಜನೆಗಳು ಮತ್ತು ರಾಜಕೀಯ ಕೋಮುವಾದ ಹಾಗೂ ಭಾರತದ ಸಾಮರಸ್ಯ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿ ಇಂದು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಸ್ವಾರ್ಥ ಆಡಳಿತ ಹಾಗೂ ಧರ್ಮ ಧರ್ಮಗಳ ನಡುವೆ ಜಾತಿ, ಮತ ಹಾಗೂ ಪಂಥಗಳ ವಿಷ ಬೀಜ ಬಿತ್ತಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದರು.

ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಮನೇಗ್ರಾ ಯೋಜನೆ ಮನೇಗ್ರಾ ಮರು ನಾಮಕರಣದ ಬಗ್ಗೆ ಮುಂದೆ ಆಗುವ ಸಮಸ್ಯೆಗಳ ಕುರಿತು ಲಾನುಭವಿಗಳಿಗೆ ಮುಟ್ಟಿಸಬೇಕು, ಯೋಜನೆ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಪಕ್ಷದಲ್ಲಿ ಚಟುವಟಿಕೆಯಿಂದ ಇರುವಂತಹ ಪ್ರಮುಖರನ್ನು ಗುರುತಿಸಿ ಪ್ರಚಾರ ಸಮಿತಿಗೆ ಸೇರಿಸಿಕೊಂಡು ಜವಾಬ್ದಾರಿ ನೀಡಬೇಕು. ಪ್ರಚಾರ ಸಮಿತಿಯ ಜವಾಬ್ದಾರಿ ಹಾಗೂ ಕಾರ್ಯಗಳನ್ನು ಅರಿತು ಕೆಲಸ ಮಾಡಬೇಕು ಎಂದರು.

ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಪ್ರಚಾರ ಸಮಿತಿ ಸಹ ಅಧ್ಯಕ್ಷ ಡಾ. ಎಲ್‌. ಹನುಮಂತಯ್ಯ ಹಾಗೂ ಸಮಿತಿ ಉಪಾಧ್ಯಕ್ಷ ಅಬ್ದುಲ್‌ ಮುನೀರ್‌ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಹುಬ್ಬಳ್ಳಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಧಾರವಾಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್‌, ಮುಖಂಡರಾದರಾಜಾದೇಸಾಯಿ, ಶರಣಪ್ಪ ಕೊಟಗಿ, ಸುನಿತಾ ಹುರಕಡ್ಲಿ, ಜ್ಯೊತಿ ಪಾಟೀಲ, ಸುರೇಖಾ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಅನೇಕ ಕಾರ್ಯಕರ್ತರು ಹಾಜರಿದ್ದರು.

RELATED ARTICLES

Latest News