Homeರಾಜ್ಯಕಾಳಸಂತೆಯಲ್ಲಿ ದಾಸ್ತಾನು ಮಾಡುತ್ತಿದ್ದ 800 ಕೆಜಿ ಪಡಿತರ ಅಕ್ಕಿ ವಶ

ಕಾಳಸಂತೆಯಲ್ಲಿ ದಾಸ್ತಾನು ಮಾಡುತ್ತಿದ್ದ 800 ಕೆಜಿ ಪಡಿತರ ಅಕ್ಕಿ ವಶ

800 kg of ration rice seized in Channapatna

ಚನ್ನಪಟ್ಟಣ,ಜ.20- ನಗರ ಪೊಲೀಸ್‌‍ಠಾಣೆ ವ್ಯಾಪ್ತಿಯ ಕೋಟೆಯ ಸೆಂಟ್‌ ಮೈಕಲ್‌ ಶಾಲೆಯ ಬಳಿ ಕಾಳಸಂತೆಯಲ್ಲಿ ಪಡಿತರ ಅಕ್ಕಿ ದಾಸ್ತಾನು ಮಾಡುವ ವೇಳೆ ದಾಳಿ ನಡೆಸಿದ ನಗರ ಪೊಲೀಸರು 800 ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪಿ.ಎಸ್‌‍.ಐ ಜಗದೀಶ್‌ ನಾಯ್‌್ಕ ಹಾಗೂ ಸಿಬ್ಬಂದಿಯಿದ್ದ ತಂಡ ಈ ದಾಳಿ ನಡೆಸಿದ್ದು, ಸುಮಾರು 17 ಪ್ಲಾಸ್ಟಿಕ್‌ ಚೀಲಗಳಲ್ಲಿ ಶೇಖರಿಸಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಂಡಿರುವುದರ ಮಾಹಿತಿ ಪಡೆದ ತಾಲ್ಲೂಕು ದಂಡಾಧಿಕಾರಿ ಬಿ.ಎನ್‌.ಗಿರೀಶ್‌ ಅವರ ಮಾರ್ಗದರ್ಶನದಲ್ಲಿ , ತಾಲ್ಲೂಕು ಕಚೇರಿಯ ಆಹಾರ ನಿರೀಕ್ಷಕಿ ಪುಷ್ವಲತಾ ಅಕ್ಕಿಯನ್ನು ತಮ ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಬಗ್ಗೆ ನಗರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ಕಿಯನ್ನು ಆ ಸ್ಥಳದಲ್ಲಿ ದಾಸ್ತಾನು ಮಾಡಿದವರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News