Friday, April 17, 2026
Homeಜಿಲ್ಲಾ ಸುದ್ದಿಗಳುನಾಗರಹಾವು-ನಾಯಿ ನಡುವೆ ಭೀಕರ ಕಾಳಗ : ಪ್ರಾಣ ಬಿಟ್ಟ ಎರಡೂ ಪ್ರಾಣಿಗಳು

ನಾಗರಹಾವು-ನಾಯಿ ನಡುವೆ ಭೀಕರ ಕಾಳಗ : ಪ್ರಾಣ ಬಿಟ್ಟ ಎರಡೂ ಪ್ರಾಣಿಗಳು

Fierce fight between cobra and dog: Both animals lost their lives

ಚಿಕ್ಕಮಗಳೂರು,ಜ.19- ರಾಟ್‌ವೀಲರ್‌ ತಳಿಯ ನಾಯಿ ಹಾಗೂ ನಾಗರಹಾವಿನ ನಡುವೆ ನಡೆದ ಭೀಕರ ಕಾಳಗದಲ್ಲಿ ಎರಡು ಪ್ರಾಣಿಗಳು ಜೀವ ಕಳೆದುಕೊಂಡ ಹದಯವಿದ್ರಾವಕ ಘಟನೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಏಕಾಏಕಿ ಎದುರಾದ ನಾಗರಹಾವನ್ನು ಕಂಡ ನಾಯಿ, ತನ್ನ ಸ್ವಭಾವದಂತೆ ಹಾವಿನ ಮೇಲೆ ದಾಳಿ ನಡೆಸಿದೆ. ಇದರಿಂದ ಹಾವು ಕೂಡ ಪ್ರತಿದಾಳಿ ನಡೆಸಿ ನಾಯಿಯನ್ನು ಹಲವು ಬಾರಿ ಕಚ್ಚಿತು.

ಕಾಳಗದ ಅಂತ್ಯದಲ್ಲಿ ನಾಯಿ ತನ್ನ ಬಲಿಷ್ಠ ದವಡೆಹಲ್ಲುಗಳಿಂದ ನಾಗರಹಾವನ್ನು ಸಂಪೂರ್ಣವಾಗಿ ಕಚ್ಚಿ ಕೊಂದಿದೆ. ಆದರೆ ನಾಗರಹಾವಿನ ವಿಷಕಾರಿ ಕಡಿತದಿಂದ ನಾಯಿ ಕೂಡ ತೀವ್ರವಾಗಿ ಗಾಯಗೊಂಡಿತ್ತು.

ಹಾವನ್ನು ಸಾಯಿಸಿದ ಬಳಿಕ ನಾಯಿ ತನ್ನ ಬೋನಿಗೆ ತೆರಳಿ ಮಲಗಿಕೊಂಡಿದ್ದು, ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಉಸಿರು ಚೆಲ್ಲಿದೆ. ಹಾವಿನ ವಿಷ ನಾಯಿಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಚಿಕಿತ್ಸೆ ದೊರಕುವ ಮುನ್ನವೇ ನಾಯಿ ಮೃತಪಟ್ಟಿದೆ.

ಘಟನೆಯ ಬಳಿಕ ಮನೆಯವರು ನಾಗರಹಾವಿಗೆ ಶಾಸ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಾಯಿ ತನ್ನ ಮಾಲೀಕರನ್ನು ಹಾಗೂ ಮನೆ ಆವರಣವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದೆ.ಸುಮಾರು ಒಂದು ಗಂಟೆಗಳ ಕಾಲ ನಡೆದ ಕಾಳಗದ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

RELATED ARTICLES

Latest News