Homeಜಿಲ್ಲಾ ಸುದ್ದಿಗಳುಇಂದಿರಾ ಕ್ಯಾಂಟಿನ್‌ಗೆ ಬೀಗ ; ಕೂಲಿ ಕಾರ್ಮಿಕರಿಗೆ ತೊಂದರೆ

ಇಂದಿರಾ ಕ್ಯಾಂಟಿನ್‌ಗೆ ಬೀಗ ; ಕೂಲಿ ಕಾರ್ಮಿಕರಿಗೆ ತೊಂದರೆ

ತುರುವೇಕೆರೆ,ಜು.13- ವಿವಿಧ ಕಾರಣಗಳ ನೆಪವೊಡ್ಡಿ ಪಟ್ಟಣದ ತಾಲ್ಲೂಕು ಕಚೇರಿ ಹಿಂಭಾಗದಲ್ಲಿದ್ದ ಇಂದಿರಾ ಕ್ಯಾಂಟಿನ್‌ ಬಾಗಿಲು ಬಂದ್‌ ಮಾಡಲಾಗಿದ್ದು, ಬಡವರಿಗೆ, ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ.

ಇಂದಿರಾ ಕ್ಯಾಂಟೀನ್‌ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಆಗಮಿಸುವ ಅದೆಷ್ಟೋ ಬಡ ಕೂಲಿ ಕಾರ್ಮಿಕರು, ಆಶಕ್ತರು, ವಯೋವೃದ್ಧರಿಗೆ ಹಸಿವು ನೀಗಿಸುವ ಕೇಂದ್ರವಾಗಿತ್ತು. ತಮ ಆಂತರಿಕ ಸಮಸ್ಯೆಯಿಂದ ಕ್ಯಾಂಟೀನ್‌ ಅನೇಕ ಬಾರಿ ಬಂದ್‌ ಆಗುತ್ತಿದೆ ಹಲವಾರು ಕಾರಣಗಳೊಡ್ಡಿ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ತಿಂಡಿ ಹಾಗೂ ಊಟ ತಯಾರಿಸದೇ ಆಹಾರ ಅರಸಿ ಬಂದ ಅಸಹಾಯಕರು, ಕೂಲಿ ಕಾರ್ಮಿಕರು ಬೀದಿ ವ್ಯಾಪಾರಿಗಳು ನಿರ್ಗತಿಕರು ಸೇರಿದಂತೆ ಸಾರ್ವಜನಿಕರು ತಿಂಡಿಗೆಂದು ಬಂದವರು ಗೇಟ್‌ ಬೀಗ ಹಾಕಿರುವುದನ್ನು ನೋಡಿ ಕೆಲವರು ಹಿಂತಿರುಗಿದರೆ, ಮತ್ತೆ ಕೆಲವರು ಅಲ್ಲಿಯೇ ನಿಂತು ಕಾದರೂ ಏನೂ ಪ್ರಯೋಜನವಿಲ್ಲದಾಯಿತು.

ಗೇಟ್‌ ಮುಂಭಾಗ ಯಾವುದೇ ನಾಮಫಲಕವಿಲ್ಲ. ಗೇಟ್‌ ಬೀಗ ಜಡಿಯಲಾಗಿದೆ. ಕ್ಯಾಂಟೀನ್‌ ಗೇಟ್‌ ತೆಗೆಸಿ ಒಳಹೋಗಿ ಸಿಬ್ಬಂದಿಯನ್ನು ವಿಚಾರಿಸಲಾಗಿ ನಾನಾ ನೆಪಗಳನ್ನು ಹೇಳುತ್ತಿದ್ದಾರೆ.

ಕ್ಯಾಂಟೀನ್‌ ತೆಗೆಯುವಲ್ಲಿ ವಿಳಂಬವಾಗಿರಬಹುದೆಂದು ತಿಳಿದು ಗೇಟ್‌ ಮುಂಭಾಗ ಕಾದು ನಿಂತು ಹಸಿದು ಕಂಗಾಲಾದವರು ಬಾಗಿಲು ತೆಗೆಯಿರಿ ಎಂದು ಮಾಡುವ ಹಸಿದವರ ಆರ್ತನಾದ ಸಂಬಂಧಪಟ್ಟವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿಸದಿರುವುದು ದುರಂತ ಹಾಗೆ ಸರ್ಕಾರಕ್ಕೆ ಹಾಗೂ ವ್‌ಯವಸ್ಥಾಪಕರಿಗೆ ಇಡಿ ಶಾಪ ಹಾಕುತ್ತಿದ್ದ ದೃಶ್ಯ ಪಟ್ಟಣದ ಇಂದಿರಾ ಕ್ಯಾಂಟೀನ್‌ ಬಳಿ ಕಂಡುಬಂದಿತು.ಈ ಸಂಬಂಧ ಸಂಬಂಧ ಪಟ್ಟ ಅಧಿಕಾರಿಗಳು ಸಂಬಂಧಪಟ್ಟ ಅವರ ವಿರುದ್ಧ ಕ್ರಮ ಜರುಗಿಸಿ ಬಡವರ ಹೊಟ್ಟೆ ತುಂಬಿಸುವಂತೆ ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.

RELATED ARTICLES

Latest News