Homeಜಿಲ್ಲಾ ಸುದ್ದಿಗಳುಫೋನ್ ಮಾಡದ ಪ್ರಿಯಕರ, ನೇಣಿಗೆ ಶರಣಾದ ಎರಡು ಮಕ್ಕಳ ತಾಯಿ

ಫೋನ್ ಮಾಡದ ಪ್ರಿಯಕರ, ನೇಣಿಗೆ ಶರಣಾದ ಎರಡು ಮಕ್ಕಳ ತಾಯಿ

ಬಾಗಲಕೋಟೆ,ಸೆ.10-ಪ್ರಿಯಕರ ಕರೆ ಮಾಡದೇ ಇದ್ದಿದ್ದಕ್ಕೆ ಹಾಗೂ ಕರೆ ಮಾಡಿದ್ರೂ ಸ್ವೀಕರಿಸದೇ ಇದ್ದಿದ್ದಕ್ಕೆ ಮನನೊಂದು ಎರಡು ಮಕ್ಕಳ ತಾಯಿ ನೇಣಿಗೆ ಶರಣಾದ ಘಟನೆ ಬಾಂಬೆ ಕಾಲೋನಿಯಲ್ಲಿ ನಡೆದಿದೆ.

ಮೆಹಬೂಬ್‌ ಬಿ (27) ನೇಣಿಗೆ ಶರಣಾದ ಮಹಿಳೆ. ಆತಹತ್ಯೆಗೂ ಮುನ್ನ, ನೇಣು ಬಿಗಿದುಕೊಳ್ಳುವುದನ್ನು ವಿಡಿಯೋ ಮಾಡಿ, ಪ್ರಿಯಕರನಿಗೆ ಕಳಿಸಿದ್ದಾಳೆ. ಅಲ್ಲದೇ ಫೋನ್‌ ಮಾಡದೆ ಇದ್ದರೆ ನೇಣು ಹಾಕಿಕೊಂಡು ಸಾಯುತ್ತೇನೆ. ನಿನಗೂ ಹಾಗೂ ಎಲ್ಲರಿಗೂ ವಿಡಿಯೋ ಕಳಿಸುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ನಿನ್ನೆ ಆಡಿಯೋ ಮೆಸೇಜ್‌ ಕೂಡ ಮಾಡಿದ್ದಳು.

ಮಹಿಳೆ ಯುವಕನೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಕೆಲ ದಿನಗಳಿಂದ ಪ್ರಿಯಕರ ಕರೆ ಮಾಡುತ್ತಿರಲಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಮನನೊಂದು ಆತಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
spot_img

Latest News