Sunday, April 12, 2026
Homeಜಿಲ್ಲಾ ಸುದ್ದಿಗಳುಮೈಸೂರು : ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 8.5 ಲಕ್ಷ ರೂ. ಕಳೆದುಕೊಂಡ ವೃದ್ಧ

ಮೈಸೂರು : ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 8.5 ಲಕ್ಷ ರೂ. ಕಳೆದುಕೊಂಡ ವೃದ್ಧ

Mysore: Elderly man falls into cyber fraudsters' trap and loses Rs. 8.5 lakh

ಮೈಸೂರು,ಮಾ.21- ಡಿಜಿಟಲ್‌ ಅರೆಸ್ಟ್‌ ಭೀತಿ ಸೃಷ್ಟಿಸಿ ಸೈಬರ್‌ ವಂಚಕರು ವೃದ್ಧರೊಬ್ಬರಿಗೆ 8.5 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಆಲನಹಳ್ಳಿ ನಿವಾಸಿ ಶ್ರೀವತ್ಸ (78) ವಂಚನೆಗೊಳಗಾದ ವೃದ್ಧ.

ಜ.17 ರಂದು ವಂಚಕರು ಶ್ರೀವತ್ಸ ಅವರ ಮೊಬೈಲ್‌ಗೆ ಕರೆ ಮಾಡಿ ತಮ ಏರ್‌ಟೆಲ್‌ ಸಿಮ್‌ನಿಂದ ಮಹಿಳೆಯರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದೀರಿ, ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ದೂರು ದಾಖಲಾಗಿರುವುದಾಗಿ ಬೆದರಿಸಿರುವುದಲ್ಲದೆ, ತಮ ವಿರುದ್ಧ ಮನಿಲ್ಯಾಂಡ್ರಿಂಗ್‌ ಕೇಸ್‌‍ನಲ್ಲಿ ನಿಮ ಬ್ಯಾಂಕ್‌ ಖಾತೆಗೆ ದಾಖಲೆ ಇಲ್ಲದ ಹಣ ವರ್ಗಾವಣೆಯಾಗಿದೆ. ಆದ್ದರಿಂದ ನೀವು ಹೌಸ್‌‍ ಅರೆಸ್ಟ್‌ ಆಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾರೆ.

ವಂಚಕರ ಮಾತಿಗೆ ಆತಂಕಗೊಂಡ ವೃದ್ಧ ಶ್ರೀವತ್ಸ ಅವರನ್ನು ಸೈಬರ್‌ ವಂಚನೆ ಜಾಲಕ್ಕೆ ಸಿಲುಕಿಸಿಕೊಂಡು ಮಾ.13 ರಿಂದ 17 ರವರೆಗೆ ಹಂತಹಂತವಾಗಿ 8,50,047 ರೂ.ಗಳನ್ನು ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ವಂಚಿಸಿದ್ದಾರೆ.

ನಂತರ ಮೋಸ ಹೋಗಿರುವುದಾಗಿ ಅರಿತ ಕೂಡಲೇ ಶ್ರೀವತ್ಸ ಅವರು ಸೆನ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಮೈಸೂರಿನಲ್ಲಿ ಸೈಬರ್‌ ಅಪರಾಧ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಸಹ ವಿದ್ಯಾವಂತರೇ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

RELATED ARTICLES

Latest News