Friday, November 22, 2024
Homeರಾಜ್ಯಡಾ.ಮಂಜುನಾಥ್ ಪ್ರತಿಸ್ಪರ್ಧಿಯಾಗುತ್ತಿದ್ದಂತೆ ಅಲರ್ಟ್ ಆದ ಡಿಕೆ ಬ್ರದರ್ಸ್

ಡಾ.ಮಂಜುನಾಥ್ ಪ್ರತಿಸ್ಪರ್ಧಿಯಾಗುತ್ತಿದ್ದಂತೆ ಅಲರ್ಟ್ ಆದ ಡಿಕೆ ಬ್ರದರ್ಸ್

ಬೆಂಗಳೂರು,ಮಾ.15- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಘೋಷಣೆಯಾಗುತ್ತಿದ್ದಂತೆ ಹೈ ಅಲರ್ಟ್ ಆಗಿರುವ ಡಿ.ಕೆ. ಸಹೋದರರು ಕ್ಷೇತ್ರದ ಪ್ರಮುಖ ನಾಯಕರ ಜೊತೆ ಉಪಹಾರ ಕೂಟ ನಡೆಸಿದ್ದಾರೆ.ಕ್ಷೇತ್ರದ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯ ಸ್ರ್ಪಧಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಪ್ರಮುಖರೊಂದಿಗೆ ಉಪಹಾರ ಸೇವಿಸಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಕೂಡ ಚುನಾವಣೆಯ ತಯಾರಿ ಮಾಡಿಕೊಳ್ಳಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತವಾಗಿದ್ದು, ಆ 2 ಪಕ್ಷಗಳಿಂದ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು. ಇಷ್ಟು ವರ್ಷ ಕಾಂಗ್ರೆಸ್ ಮತ್ತು ಜನತಾದಳದ ನಡುವೆ ಸ್ಪರ್ಧೆ ಇತ್ತು.

ಈಗ ಜನತಾದಳ ಇಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕುಟುಂಬವೇ ಬಿಜೆಪಿ ಜೊತೆ ದಳವನ್ನು ಸೇರಿಸಿದ್ದಾರೆ. ಮುಂದೆ ನಮ್ಮ ರಾಜಕೀಯ ಭವಿಷ್ಯ ಏನು ಎಂದು ಕಾರ್ಯಕರ್ತರು ಆತಂಕಗೊಂಡಿದ್ದಾರೆ ಎಂದು ಹೇಳಿದರು. ಜನತಾದಳದ ಕಾರ್ಯಕರ್ತರು, ಪ್ರಮುಖರು ತಮ್ಮ ವಿರುದ್ಧ ಸತತ ಹೋರಾಟ ನಡೆಸಿದ್ದರು. ಈಗ ಆತಂಕಗೊಂಡಿರುವ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವಂತೆ ನಮ್ಮ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದೇವೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಡಿ.ಕೆ. ಸಹೋದರರಿಗೆ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಅಪ್ರಸ್ತುತ. ಮೊದಲು ಅವರು ಜನತಾದಳದ ಬಗ್ಗೆ ಮಾತನಾಡಲಿ. ಆಮೇಲೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳಿಕೆ ನೀಡಲಿ ಎಂದು ಹೇಳಿದರು.

ಬೆಂಗಳೂರು ಅರಮನೆ ಮೈದಾನ ಸುತ್ತ ಇರುವ ಜಾಗವನ್ನು ಸ್ವಾೀಧಿನಪಡಿಸಿಕೊಂಡು ರಸ್ತೆ ಅಭಿವೃದ್ಧಿಪಡಿಸಲು ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ತೀರ್ಮಾನವಾಗಿತ್ತು. ಈ ಕುರಿತು ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ನ್ಯಾಯಮೂರ್ತಿಗಳು ಅಕಾರಿಗಳಿಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ನಾನು ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೆ. ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಾಗಿರಲಿಲ್ಲ. ಏನು ಚರ್ಚೆಗಳಾಗಿವೆ ಎಂದು ತಿಳಿದುಕೊಳ್ಳುತ್ತೇನೆ ಎಂದರು.ನಮ್ಮ ಸರ್ಕಾರ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲಿದೆ ಎಂದು ಹೇಳಿದರು.

RELATED ARTICLES

Latest News