Friday, November 22, 2024
Homeರಾಷ್ಟ್ರೀಯ | Nationalಲೂಟಿ ಹೊಡೆಯಲು ಬೆಂಗಳೂರಿನಲ್ಲಿ ಸುರಂಗ ಮಾರ್ಗ : ಬಿಜೆಪಿ ಆರೋಪ

ಲೂಟಿ ಹೊಡೆಯಲು ಬೆಂಗಳೂರಿನಲ್ಲಿ ಸುರಂಗ ಮಾರ್ಗ : ಬಿಜೆಪಿ ಆರೋಪ

ಬೆಂಗಳೂರು,ಅ.26- ಲೂಟಿ ಹೊಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸುರಂಗ ಮಾರ್ಗ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿದೆ. ಈ ಕುರಿತಾಗಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ( ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿರುವ ಬಿಜೆಪಿ, ಇಸ್ರೇಲ್ ನಿರ್ನಾಮ ಮಾಡಲು ಹಮಾಸ್ ಗಾಜಾದಲ್ಲಿ 500 ಕಿ.ಮೀ ಸುರಂಗ ನಿರ್ಮಾಣ ಮಾಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟವನ್ನು ದೋಚಲು ಸುರಂಗ ತೋಡುವ ಕೆಲಸಕ್ಕೆ ಕೈಹಾಕುತ್ತಿದೆ ಎಂದು ಆರೋಪಿಸಿದೆ.

ಅಷ್ಟೇ ಅಲ್ಲದೆ ಈ ಸುರಂಗ ಮಾರ್ಗದಲ್ಲಿ ಯಾರಿಗೆ ಎಷ್ಟು ಪಾಲು ಎಂಬ ನಿಟ್ಟಿನಲ್ಲಿ ಜಂಗೀಕುಸ್ತಿ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದೆ.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣವಾಗಿರುವುದು ಭ್ರಷ್ಟಾಚಾರ ಮಾಡಲು ಬೆಂಗಳೂರು ನಗರದಲ್ಲಿ ತೋಡಲು ಹೊರಟಿರುವ ಸರಂಗ ಮಾರ್ಗವಾಗಿದೆ ಎಂದು ವಿಡಿಯೋದಲ್ಲಿ ಆರೋಪ ಮಾಡಲಾಗಿದೆ.

ಕಿ. ಮೀಟರ್‍ಗೆ 450 ಕೋಟಿ ಖರ್ಚು ಮಾಡಿ 190 ಕಿ. ಮೀಗೆ ಲಕ್ಷ ಕೋಟಿ ರೂಪಾಯಿ ಖರ್ಚು ಆಗುತ್ತದೆ. ಈಗಾಗಲೇ 65 ಕಿ.ಮೀ ಸುರಂಗ ಕೊರೆಯಲು ಆದಷ್ಟು ಬೇಗ ಟೆಂಡರ್ ಕರೆದು ತಮ್ಮ ಜೇಬು ತುಂಬಿಸಿಕೊಳ್ಳುವ ಉದ್ದೇಶವನ್ನು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

RELATED ARTICLES

Latest News