Tuesday, April 30, 2024
Homeರಾಜ್ಯರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ : ಡಿಕೆಶಿ

ರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ : ಡಿಕೆಶಿ

ಬೆಂಗಳೂರು, ಜ.13- ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರವೊಂದರಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವದ್ಧಂತಿಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಲ್ಲಗಳೆದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಂತೂ ಇದರ ಬಗ್ಗೆ ಈವರೆಗೂ ಮಾಹಿತಿ ಇಲ್ಲ. ಯಾರು ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದರು. ಬೆಂಗಳೂರಿನ ಜಯನಗದಲ್ಲಿ ಪುಟ್ ಪಾತ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಆದೇಶದ ಅನುಸಾರ ನಡೆಸುಕೊಳ್ಳುತ್ತಿರುವುದಾಗಿ ಹೇಳಿದರು.

ಪುಟ್‍ಪಾತ್ ವ್ಯಾಪಾರಿಗಳು ನೋಂದಣಿ ಮಾಡಿಕೊಂಡು ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿ ಇಟ್ಟುಕೊಂಡರೆ ಅನುಮತಿಯನ್ನೂ ನೀಡುತ್ತೇವೆ, ಹಣದ ಸಹಾಯವನ್ನು ಮಾಡುತ್ತೇವೆ. ಅದರ ಬದಲು ಶಾಶ್ವತ ಮಾದರಿಯಲ್ಲಿ ಟೆಂಟ್ ನಿರ್ಮಿಸಿಕೊಂಡರೆ ಜನ ಎಲ್ಲಿ ಓಡಾಡುತ್ತಾರೆ. ಅಕ್ಕಪಕ್ಕದವರು ನಮ್ಮ ಮನೆಯ ಮುಂದೆ ವಾಹನ ನಿಲ್ಲಿಸಬೇಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಇದು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನ್ಯಾಯಾಲಯವೂ ಆದೇಶ ನೀಡಿದೆ ಎಂದರು.

ದೆಹಲಿ ವಿವಿಯ ಮಹಿಳಾ ಶೌಚಾಲಯಗಳ ಮುಂದೆ ಸಿಸಿ ಕ್ಯಾಮರಾ ಅಳವಡಿಕೆ

ಪುಟ್‍ಪಾತ್ ಇರುವುದು ಜನ ಸಂಚರಿಸಲು. ನಮಗೆ ಜನ ಮತ್ತು ಸಮಪರ್ಕ ಸಂಚಾರ ವ್ಯವಸ್ಥೆ ಮುಖ್ಯವಾಗಿದೆ. ಸಮಸ್ಯೆಯ ಬಗ್ಗೆ ನನಗೆ ಮಾಹಿತಿ ಇದೆ. ಎರಡು ಮೂರು ಬಾರಿ ನಾನು ಚರ್ಚೆ ನಡೆಸಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ, ಕ್ರಮಬದ್ಧವಾದ ಶಾಶ್ವತ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬ ಆರೋಪದಲ್ಲಿ ಉರುಳಿಲ್ಲ. ನಮ್ಮ ಸರ್ಕಾರ ಎಲ್ಲರಿಗೂ ಸೂಕ್ತ ರಕ್ಷಣೆ ನೀಡಲಿದೆ. ಬಿಜೆಪಿಯವರು ಅವರ ಸರ್ಕಾರ ಅಕಾರದಲ್ಲಿದ್ದಾಗ ನಡೆದುಕೊಂಡಿದ್ದನ್ನು ಹೇಳುತ್ತಿದ್ದಾರೆ. ನಮ್ಮ ಕಾಲದಲ್ಲಿ ನೈತಿಕ ಪೊಲೀಸ್‍ಗಿರಿ ಸೇರಿದಂತೆ ಕಾನೂನು ಕೈಗೆತ್ತಿಕೊಳ್ಳುವ ಯಾವ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ ಎಂದರು.

ಬಿಜೆಪಿ ಸರ್ಕಾರ ಅನುಭವ ಮಂಡಪ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ. ನಮ್ಮ ಸರ್ಕಾರವೇ ಅನುಭವ ಮಂಡಪ ನಿರ್ಮಾಣವನ್ನು ಆರಂಭಿತ್ತು. ನಮಗೆ ವಚನಕಾರರು ಹಾಗೂ ಆ ಕಾಲದ ಸಾಂಸ್ಕøತಿ ಚಟುವಟಿಕೆಗಳ ಬಗ್ಗೆ ಗೌರವ ಇದೆ. ಬಸವರ ಕಲ್ಯಾಣ ಕ್ಷೇತ್ರದ ಶಾಸಕರು ಅನುಭವ ಮಂಡಪಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಬಿಜೆಪಿ ಸರ್ಕಾರವಿದ್ದಾಗ ಇವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

RELATED ARTICLES

Latest News