Tuesday, September 17, 2024
Homeಬೆಂಗಳೂರುಮನೆಗೆ ಬೀಗ ಹಾಕಿ ಕೀ ಅಡಗಿಸಿಡುವ ಅಭ್ಯಾಸವಿದೆಯಾ..? ಹಾಗಾದ್ರೆ ಹುಷಾರ್

ಮನೆಗೆ ಬೀಗ ಹಾಕಿ ಕೀ ಅಡಗಿಸಿಡುವ ಅಭ್ಯಾಸವಿದೆಯಾ..? ಹಾಗಾದ್ರೆ ಹುಷಾರ್

ಬೆಂಗಳೂರು,ಜು.19- ನಗರದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ್‌ ಇಂದಿಲ್ಲಿ ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ ಮನೆಗಳಿಗೆ ಬೀಗ ಹಾಕಿ ಹೊರಹೋಗುವ ಸಂದರ್ಭದಲ್ಲಿ ಕೀಗಳನ್ನು ಮನೆಯ ಆವರಣದಲ್ಲಿ ಬಿಟ್ಟು ಹೋಗಬಾರದು ಎಂದು ಸಲಹೆ ನೀಡಿದರು.

ಕೆಲವರು ಮನೆಗೆ ಬೀಗ ಹಾಕಿ ಕೀಯನ್ನು ಚಪ್ಪಲಿ ಸ್ಟ್ಯಾಂಡ್‌, ಹೂಕುಂಡ, ಕಿಟಕಿ ಮತ್ತಿತರ ಜಾಗಗಳಲ್ಲಿ ಇಟ್ಟು ಹೋಗುವುದು ಮಾಮೂಲು. ಇದರಿಂದಾಗಿ ಮನೆಗಳ್ಳತನಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಇನ್ನುಮುಂದೆ ಎಚ್ಚರಿಕೆ ವಹಿಸಬೇಕು ಎಂದರು.
ನಗರದಲ್ಲಿ ಚಪ್ಪಲಿ, ಶೂಗಳ್ಳರು ಹೆಚ್ಚಾಗಿದ್ದಾರೆ. ಹೀಗಾಗಿ ಸಾರ್ವಜನಿಕರು ತಮ ಬೆಲೆ ಬಾಳುವ ಚಪ್ಪಲಿ, ಶೂಗಳನ್ನು ಮನೆ ಮುಂದೆ ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಆಯುಕ್ತರು ಸೂಚಿಸಿದರು.

ಬಸ್‌‍ಗಳಲ್ಲಿ ಸಹಪ್ರಯಾಣಿಕರಂತೆ ವರ್ತಿಸಿ ಕೆಲವರು ಮಹಿಳೆಯರ ಹಣ ಮತ್ತಿತರ ವಸ್ತುಗಳನ್ನು ದೋಚುತ್ತಿರುವುದರಿಂದ ಬಸ್‌‍ಗಳಲ್ಲಿ ಸಂಚರಿಸುವ ಮಹಿಳೆಯರು ತಮ ಬ್ಯಾಗ್‌ಗಳಲ್ಲಿ ಭಾರೀ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣವನ್ನು ಕೊಂಡೊಯ್ಯಬಾರದು. ಒಂದು ವೇಳೆ ಕೊಂಡೊಯ್ದರೆ ಜೋಪಾನವಾಗಿರಬೇಕು ಎಂದು ಆಯುಕ್ತರು ಕಿವಿಮಾತು ಹೇಳಿದರು.

RELATED ARTICLES

Latest News