Thursday, December 12, 2024
Homeಜಿಲ್ಲಾ ಸುದ್ದಿಗಳು | District Newsದೊಡ್ಡಬಳ್ಳಾಪುರ : ಜಮೀನಿನಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ

ದೊಡ್ಡಬಳ್ಳಾಪುರ : ಜಮೀನಿನಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ

Doddaballapura: Huge Python spotted in farm land

ದೊಡ್ಡಬಳ್ಳಾಪುರ,ನ.20– ಜೋಳದ ಹೊಲದಲ್ಲಿ ಮೇವು ಕೊಯ್ಯುವಾಗ ಬೃಹತ್‌ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ರೈತ ಒಂದು ಕ್ಷಣ ಹೌಹಾರಿಹೋಗಿದ್ದಾರೆ.

ತಾಲ್ಲೂಕಿನ ಹುಲುಕುಡಿ ಬೆಟ್ಟದ ಹಿಂಭಾಗ, ಚನ್ನವೀರನಹಳ್ಳಿ ಸಮೀಪದ ಹಳೇಕೋಟೆ ಗ್ರಾಮದ ಮುನಿಕುಮಾರ್‌ ಎಂಬುವವರ ಜೋಳದ ಹೊಲದಲ್ಲಿ ರಾಜು ಎಂಬುವವರು ಜಾನುವಾರುಗಳಿಗೆ ಮೇವು ಕೊಯ್ಯುತ್ತಿದ್ದಾಗ ಬೃಹತ್‌ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

ಇದರಿಂದ ಒಂದು ಕ್ಷಣ ಗರಬಡಿದಂತೆ ನಿಂತ ರಾಜು ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.ತಂಡೋಪತಂಡವಾಗಿ ಬಂದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪ್ರಶಾಂತ್‌ ಅವರು ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅರಸರಾಜು, ಕೃಷ್ಣಮೂರ್ತಿ, ಗೋವಿಂರಾಜು, ರಮೇಶ್‌ ಮತ್ತಿತರರಿದ್ದರು.

RELATED ARTICLES

Latest News