Tuesday, May 21, 2024
Homeರಾಷ್ಟ್ರೀಯದೆಹಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ

ದೆಹಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ , ಮೇ 1-ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದು ವಿದ್ಯಾರ್ಥಿಗಳು, ಶಿಕ್ಚಕರು ಹಾಗು ಪೋಷಕಎಲದಲಿ ಭೀತಿ ಆವರಿಸಿದೆ.

ಮಯೂರ್‌ ವಿಹಾರ್‌ನಲ್ಲಿರುವ ಮದರ್‌ ಮೇರಿ ಶಾಲೆ, ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್‌ ಸ್ಕೂಲ್‌‍, ಚಾಣಕ್ಯಪುರಿಯ ಸಂಸ್ಕೃತಿ ಶಾಲೆ, ವಸಂತ್‌ ಕುಂಜ್‌ನಲ್ಲಿರುವ ದೆಹಲಿ ಪಬ್ಲಿಕ್‌ ಸ್ಕೂಲ್‌ ಮತ್ತು ಸಾಕೇತ್‌ನ ಅಮಿಟಿ ಸ್ಕೂಲ್‌ಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಇಮೇಲ್‌ಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಎಲ್ಲಾ ಐದು ಶಾಲೆಗಳಿಗೆ ಬಾಂಬ್‌ ಪತ್ತೆ ತಂಡ, ಬಾಂಬ್‌ ನಿಷ್ಕ್ರಿಯ ದಳ ಮತ್ತು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ಶಾಲೆಗೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಹೆಚ್ಚಿನ ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಮೇಲ್‌ ಬಂದಿದೆ ಎಂದು ಹೇಳಲಾಗಿದ್ದು, ಇದರ ಹಿಂದೆ ಒಬ್ಬ ವ್ಯಕ್ತಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ ದೆಹಲಿ ಪೊಲೀಸ್‌‍ ವಿಶೇಷ ಸೆಲ್‌ ಸೇರಿದಂತೆ ಭದ್ರತಾ ಸಂಸ್ಥೆಗಳು ಇಮೇಲ್‌ನ ಮೂಲವನ್ನು ಹುಡುಕುತ್ತಿದೆ.

RELATED ARTICLES

Latest News