Monday, May 6, 2024
Homeಜಿಲ್ಲಾ ಸುದ್ದಿಗಳುಬರಿದಾದ ಹೇಮಾವತಿ ಒಡಲು, ಜಲಚರಗಳ ಸಾವು

ಬರಿದಾದ ಹೇಮಾವತಿ ಒಡಲು, ಜಲಚರಗಳ ಸಾವು

ಹಾಸನ, ಏ.8- ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬರಗಾಲ ಎದುರಾಗಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯದ ಒಡಲು ಬರಿದಾಗಿ ರಾಶಿರಾಶಿ ಮೀನುಗಳು ಪ್ರಾಣಬಿಡುತ್ತಿವೆ. ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ದಿನೇ ದಿನೇ ಬತ್ತಿ ಹೋಗುತ್ತಿದೆ. ಹಾಸನ ನಗರದ 35 ವಾರ್ಡ್‍ಗಳಿಗೆ ಪ್ರತಿನಿತ್ಯ 30 ಎಂಎಲ್‍ಡಿ ಕುಡಿಯುವ ನೀರು ಬೇಕಿದೆ. ಆದರೆ , ಅಣೆಕಟ್ಟೆಯಲ್ಲಿ ಕೇವಲ 10 ಟಿಎಂಸಿ ನೀರು ಉಳಿದಿದೆ.

ಇದರಲ್ಲಿ ಕೇವಲ ಆರು ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ನಾಲ್ಕು ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಸಲು ಸಾಧ್ಯವಿಲ್ಲ ಎನ್ನುವುದು ಚಿಂತೆಗೆ ಕಾರಣವಾಗಲಿದೆ.ಮಳೆ ಬಾರದಿದ್ದಲ್ಲಿ ಹಾಸನ ನಗರ ನಿವಾಸಿಗಳಿಗೆ ಕುಡಿಯುವ ನೀರಿಗೆ ಸಂಕಟ ಎದುರಾಗಲಿದೆ. ಬಿಸಿಲ ಬೇಗೆಗೆ ಹೇಮಾವತಿ ಅಣೆಕಟ್ಟೆ ಹಿನ್ನೀರಿನಲ್ಲಿ ಪ್ರತಿನಿತ್ಯ ನೂರಾರು ಮೀನುಗಳು ಸಾವನ್ನಪ್ಪುತ್ತಿವೆ.

ನದಿಯ ದಡದ ಸುತ್ತಲೂ ಸತ್ತು ಬಿದ್ದಿದ್ದು, ಕೊಳೆತು ನಾರುತ್ತಿವೆ. ರಾಜ್ಯದ ವಿವಿಧೆಡೆ ಮೊದಲ ಮಳೆ ಬಿದ್ದರೂ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ತೀವ್ರ ಬರಗಾಲ ಎದುರಿಸುತ್ತಿರುವ ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರುತ್ತಿದೆ. ಇದೇ ಮೊದಲ ಬಾರಿಗೆ ಬೇಲೂರು ತಾಲ್ಲೂಕಿನ, ಜಾವಗಲ್ ಹಾಗೂ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ.

ಬಿಸಿಲಿನ ತಾಪಕ್ಕೆ ಹಾಸನ ಜಿಲ್ಲೆಯ ಜನ ಹೈರಾಣಾಗುತ್ತಿದ್ದು, ಮಳೆ ಬಾರದಿದ್ದರೆ ಇನ್ನು ಹದಿನೈದು ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.37.103 ಟಿಎಂಸಿ ನೀರಿನ ಸಾಮಥ್ರ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಸದ್ಯ ಜಲಾಶಯದಲ್ಲಿ 10.387 ಟಿಎಂಸಿ ನೀರಿದೆ.

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿ, ಇಂದಿನ ಪ್ರಮಾಣ 2881.77 ಅಡಿ, ಕಳೆದ ವರ್ಷ ಇದೇ ದಿನದಂದು ಹೇಮಾವತಿ ನದಿಯಲ್ಲಿದ್ದ ನೀರು 19.902 ಟಿಎಂಸಿ, ಕಳೆದ ವರ್ಷ ಇದೇ ದಿನದಂದು ಇದ್ದಿದ್ದು 2900.33 ಅಡಿಗಳಷ್ಟು ನೀರು.

RELATED ARTICLES

Latest News