Thursday, December 12, 2024
Homeಬೆಂಗಳೂರುಸಚಿವ ಜಮೀರ್ ಪುತ್ರನ ಕಿರಿಕ್, ಆತ್ಮಹತ್ಯೆ ಯತ್ನಿಸಿದ ಡ್ರೋನ್ ಟೆಕ್ನಿಷಿಯನ್

ಸಚಿವ ಜಮೀರ್ ಪುತ್ರನ ಕಿರಿಕ್, ಆತ್ಮಹತ್ಯೆ ಯತ್ನಿಸಿದ ಡ್ರೋನ್ ಟೆಕ್ನಿಷಿಯನ್

drone technician attempts suicide

ಬೆಂಗಳೂರು, ನ.30- ಡ್ರೋನ್ ಟೆಕ್ನಿಷಿಯನ್ ಆತಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಲ್ಟ್ ಚಿತ್ರದ ನಾಯಕ ನಟ, ಸಚಿವ ಜಮೀರ್ ಅವರ ಪುತ್ರ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ್ ವಿರುದ್ಧ ದೂರು ದಾಖಲಿಸಲಾಗಿದೆ.

ಕಲ್ಟ್ ಚಿತ್ರ ತಂಡದಲ್ಲಿ ಡ್ರೋನ್ ತಂತ್ರಜ್ಞನಾಗಿ ಸಂತೋಷ್ ಕೆಲಸ ಮಾಡುತ್ತಿದ್ದು, ನ.25ರಂದು ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ವಿಂಡ್ ಫ್ಯಾನ್ಗೆ ತಗುಲಿ ಡ್ರೋನ್ ತುಂಡಾಗಿದೆ.

ಸಂತೋಷ್ ಅವರು 25 ಲಕ್ಷ ಸಾಲ ಮಾಡಿ ಡ್ರೋನ್ ಖರೀದಿಸಿದ್ದು, ಡ್ರೋನ್ ತುಂಡಾದ ಕಾರಣ ನಷ್ಟ ಕಟ್ಟಿಕೊಡುವಂತೆ ನಾಯಕ ನಟ ಜೈದ್ ಬಳಿ ಮನವಿ ಮಾಡಿದರೂ ಪರಿಹಾರ ನೀಡದೆ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದ ಡ್ರೋನ್ ತಂತ್ರಜ್ಞ ಸಂತೋಷ್ ಆತಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಸಂತೋಷ್ ಅವರ ಸಹೋದರಿ ನಾಯಕ ನಟ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ್ ವಿರುದ್ಧ ಗಂಭೀರ ಆರೋಪ ಮಾಡಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂಗಳವಾರ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.

RELATED ARTICLES

Latest News