Tuesday, February 27, 2024
Homeರಾಜ್ಯರಾಜ್ಯದಲ್ಲಿ ತೀವ್ರ ಬರ, ಮೇವು ಮತ್ತು ನೀರಿಗೆ ಸಂಕಷ್ಟ

ರಾಜ್ಯದಲ್ಲಿ ತೀವ್ರ ಬರ, ಮೇವು ಮತ್ತು ನೀರಿಗೆ ಸಂಕಷ್ಟ

ಬೆಂಗಳೂರು, ಡಿ.27- ಹಿಂದೆಂದೂ ಕಾಣದ ಭೀಕರ ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಪಟ್ಟಣಗಳು ಮತ್ತು ನಗರಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಎದುರಾಗಲಿರುವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಜ್ಞರು, ನೀರನ್ನು ವಿವೇಚನಾಯುಕ್ತವಾಗಿ ಬಳಸಲು ಜನರಿಗೆ ಸಲಹೆ ಮಾಡಿದ್ದಾರೆ. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಜಲಾಶಯಗಳ ನೀರನ್ನು ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲು ನಿರ್ಧರಿಸಿದೆ. ಇದರಿಂದಾಗಿ ಈಗಾಗಲೇ ಮುಂಗಾರು ವೈಫಲ್ಯದಿಂದ ಸಂಕಷ್ಟದಲ್ಲಿರುವ ರೈತರಿಗೆ ನೀರಾವರಿಗೆ ಹೆಚ್ಚಿನ ನೀರು ಸಿಗದಂತಾಗುತ್ತಿದೆ.

ಕೆಎಸ್‍ಎನ್‍ಡಿಎಂಸಿ ಪ್ರಕಾರ, 895 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಪ್ರಮುಖ ಜಲಾಶಯಗಳಲ್ಲಿ ಈಗ ಕೇವಲ 394 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 668 ಟಿಎಂಸಿ ಅಡಿ ನೀರಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ಒಟ್ಟು ಸಾಮಥ್ರ್ಯ 114 ಟಿಎಂಸಿ ಅಡಿಯಷ್ಟಿದ್ದರೆ, ಇಲ್ಲಿಯವರೆಗೆ ಕೇವಲ 52 ಟಿಎಂಸಿ ಅಡಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 83 ಟಿಎಂಸಿ ಅಡಿ ನೀರು ಇತ್ತು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸುವುದು ತನ್ನ ಆದ್ಯತೆಯಾಗಿದೆ ಎಂದು ಸರ್ಕಾರವು ಹೇಳುತ್ತಿದ್ದರೂ, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ರಾಜ್ಯವು ನೀರಿನ ಕೊರತೆಯನ್ನು ಎದುರಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ದೀದಿ ಸರ್ಕಾರಕ್ಕಿಂತ ಎಡಪಕ್ಷಗಳ ಆಡಳಿತ ಉತ್ತಮವಾಗಿತ್ತು : ಅಮಿತ್ ಶಾ

ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ಅಂತರ್ಜಲವನ್ನು ಅವಲಂಬಿಸಿರುವ ಸ್ಥಳಗಳ ಮೇಲೂ ಪರಿಣಾಮ ಬೀರಿದೆ. ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳ ಪ್ರಕಾರ, ಮಳೆ ಕೊರತೆಯಿಂದಾಗಿ ರೈತರು ಬೋರ್ವೆಲ್‍ಗಳನ್ನು ಕೊರೆಯುವ ಮೂಲಕ ಅಂತರ್ಜಲವನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವುದರ ಜೊತೆಗೆ ಹಲವು ಸ್ಥಳಗಳಲ್ಲಿ, ಬೋರ್ವೆಲ್‍ಗಳು ಸಹ ಬತ್ತಿರುವುದು ಪರಿಸ್ಥಿತಿಯನ್ನು ಆತಂಕಕ್ಕೆ ನೂಕಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1112 ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಎಲ್ಲಾ ಗ್ರಾಮಗಳಿಗೂ ಟ್ಯಾಂಕರ್ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡಲಾಗಿದ್ದರೂ, ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.

ರಾಜ್ಯದ 31 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಮೇ ಆರಂಭದ ಹೊತ್ತಿಗೆ ಇದು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದ್ದು, ಜೂನ್ ಮೊದಲ ವಾರದಲ್ಲಿ ಸುರಿಯುವ ಮುಂಗಾರು ಮಳೆವರೆಗೆ ಪರಿಸ್ಥಿತಿಯನ್ನು ಜಿಲ್ಲಾಡಳಿತಗಳು ನಿರ್ವಹಿಸಬೇಕಿದೆ.

ಕಳೆದ ವರ್ಷಕ್ಕಿಂತಲೂ ಈ ಬಾರಿ ಕುಡಿಯುವ ನೀರಿನ ಬೇಡಿಕೆ ಬಿಗಡಾಯಿಸಿದೆ. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಿಂದ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 4ರಿಂದ 5 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಳೆದ ಎರಡು ದಿನಗಳಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಬಗ್ಗೆ ಸತತ ಸಭೆ ನಡೆಸಿ ಪರಿಹಾರ ಮಾರ್ಗಸೂಚಿಗಳನ್ನು ಜಿಲ್ಲೆಗಳಿಗೆ ರವಾನಿಸಿದೆ.

ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಗೊಳಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಖಾಸಗಿ ಟ್ಯಾಂಕರ್ ಮೂಲಕ ಎಷ್ಟು ಸಾಧ್ಯವೋ ಅಷ್ಟು ನೀರಿನ ಪೂರೈಕೆ ಮಾಡಬೇಕು. ನೀರಿನ ಲಭ್ಯತೆ ಆಧರಿಸಿ ಖಾಸಗಿ ಬೋರ್‍ವೆಲ್‍ಗಳನ್ನು ಬಳಕೆ ಮಾಡಬೇಕು. ಕೊನೆಯ ಹಂತದಲ್ಲಿ ಮಾತ್ರ ಹೊಸ ಬೋರ್ ವೆಲ್ ಕೊರೆಯುವುದಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಇದುವರೆಗೆ 1112 ಹಳ್ಳಿಗಳಲ್ಲಿ ಕುಡಿಯುವುದಕ್ಕೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಹೊಸ ಬೋರ್‍ವೆಲ್‍ಗಳಿಗೆ ಒತ್ತಡ: ಗ್ರಾಮೀಣ ಪ್ರದೇಶದಲ್ಲಿ ಹೊಸ ಬೋರ್‍ವೆಲ್ ಕೊರೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜನಪ್ರತಿನಿಗಳು ಸರ್ಕಾರದ ಮೇಲೆ ವ್ಯಾಪಕ ಒತ್ತಡ ಹೇರುತ್ತಿದ್ದು, ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಬೋರ್‍ವೆಲ್ ಶಾಶ್ವತ ಪರಿಹಾರವಲ್ಲ. ಇದರಿಂದ ಅಂತರ್ಜಲದ ತೀವ್ರ ಕುಸಿತವಾಗುತ್ತದೆ ಎಂಬ ಕಾರಣಕ್ಕಾಗಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೆ ರಾಜ್ಯ ಸರ್ಕಾರ ಕೆಲ ನಿರ್ಬಂಧ ವಿಧಿಸಿದೆ. ದಿನೇ ದಿನೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. 1,200ರಿಂದ 1,500 ಅಡಿಗಳ ವರೆಗೆ ಬೋರ್‍ವೆಲ್ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಮಂಜಿನ ನಗರಿಯಾದ ದೆಹಲಿ, ಆರೆಂಜ್ ಅಲರ್ಟ್ ಘೋಷಣೆ

ಮೇವು, ನೀರಿನ ಸಮಸ್ಯೆ: ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಜೊತೆ ಮೇವಿನ ಸಮಸ್ಯೆಯೂ ಕಾಡುತ್ತಿದೆ. ದಿನನಿತ್ಯ ರೈತರು ಸಾಕಿರುವ ಪ್ರಾಣಿಗಳಿಗೆ ಮೇವು ಎಷ್ಟು ಮುಖ್ಯವೋ ಅಷ್ಟೇ ನೀರು ಸಹ ಮುಖ್ಯವಾಗಿರುತ್ತದೆ. ಮೇವು ತಿಂದ ನಂತರ ಕೂಡಲೇ ಜಾನುವಾರುಗಳಿಗೆ ನೀರುಣಿಸಬೇಕು. ಎಲ್ಲಿಯೂ ನೀರು ಸಿಗದ ಕಾರಣ ದನಕರುಗಳನ್ನು ಬಯಲಿಗೆ ಕರೆದುಕೊಂಡು ಬರುತ್ತಿಲ್ಲ. ಬೇಸಿಗೆಯಲ್ಲಿ ಮೇವಿನ ಕೊರತೆ ಹೆಚ್ಚಾಗಿದೆ. ದಿನೇ ದಿನೆ ಬಿಸಿಲಿನ ತಾಪ ಹೆಚ್ಚಳದಿಂದ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಮೇವಿಗಾಗಿ ಹರಸಾಹಸ: ಈ ಬಾರಿ ಭೀಕರ ಬಲಗಾಲದಿಂದ ತಮ್ಮ ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ರೈತರು ಕಂಗಾಲಾ ಗಿದ್ದಾರೆ. ಗ್ರಾಮೀಣ ಭಾಗದಲ್ಲಿ ನೀರು ಇರುವ ರೈತರ ತೋಟಗಳಲ್ಲಿ ಹಸಿ ಮೇವು ಬೆಳೆದುಕೊಳ್ಳುತ್ತಾರೆ.

ಇಲ್ಲದಿದ್ದರೆ ರೈತರು ಒಣ ಮೇವಿನ ಮೊರೆ ಹೋಗುತ್ತಾರೆ. ಬರಗಾಲದಲ್ಲೂ ಒಣ ರಾಗಿ ಹುಲ್ಲು ಒಂದು ಹೊರೆಗೆ ಸರಾಸರಿ 110 ರಿಂದ 150 ರೂ. ವರೆಗೆ ನಿಗದಿಯಾಗಿದೆ. ಒಂದು ಕಟ್ಟು ಒಣ ಹುಲ್ಲು ಒಂದು ದಿನಕ್ಕೆ ಸಕಾಗುವುದಿಲ್ಲ. ರೈತರು ಪ್ರತಿನಿತ್ಯ ಸುಮಾರು 5-6 ಕಿ.ಮೀ. ದೂರದ ಬೇರೆ ಬೇರೆ ಗ್ರಾಮಗಳಲ್ಲಿ ಬೆಳೆದಿರುವ ಜೋಳದ ಕಡ್ಡಿ, ಒಣ ರಾಗಿ ಹುಲ್ಲು ಮತ್ತಿತರ ಮೇವು ತರಲು ಹರಸಾಹಸ ಪಡುತ್ತಿದ್ದಾರೆ.

RELATED ARTICLES

Latest News