Tuesday, July 16, 2024
Homeಜಿಲ್ಲಾ ಸುದ್ದಿಗಳುಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ : ಪೆಡ್ಲರ್‌ಗಳನ್ನು ಮಟ್ಟಹಾಕ್ತಿವಿ ಎಂದ ಶಶಿಕುಮಾರ್‌

ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ : ಪೆಡ್ಲರ್‌ಗಳನ್ನು ಮಟ್ಟಹಾಕ್ತಿವಿ ಎಂದ ಶಶಿಕುಮಾರ್‌

ಹುಬ್ಬಳ್ಳಿ,ಜು.9- ಹುಬ್ಬಳ್ಳಿ- ಧಾರವಾಡ ಅವಳಿನಗರ ಹೊರ ಭಾಗಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ದಂಧೆ ಮೀತಿ ಮೀರಿದ್ದು , ಮಟ್ಟ ಹಾಕಲು ಮುಂದಾಗಿದ್ದೇವೆ ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್‌‍ ಕಮೀಷನರ್‌ ಶಶಿಕುಮಾರ್‌ ಹೇಳಿದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಮಾಡ ಲಾಗುತ್ತಿದೆ. ಈಗ 180ಕ್ಕೂ ಹೆಚ್ಚು ಆರೋಪಗಳಿಗೆ ಪೇರಡ್‌ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದರು.

ಎನ್‌ಡಿಪಿಎಸ್‌‍ ಕಾಯ್ದೆ ಅಡಿ ಆರೋಪಿಗಳಾಗಿದ್ದಾರೆ. ಅಂಥವರನ್ನು ಕೇವಲ ಸುಮನೆ ಅವರನ್ನು ಕರೆಸಿ ಕಳಿಸುವುದಿಲ್ಲ. ಯಾರಾರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೋ ಅಂಥವರ ವಿರ್ದುದ ರೌಡಿಶೀಟರ್‌ ತೆರೆಯಲಾ ಗುವುದು ಎಂದು ಹೇಳಿದರು.

ಎನ್‌ಡಿಪಿಎಸ್‌‍ನಲ್ಲಿ ಭಾಗಿ ಯಾದವರು ಅವರಿಗೆ ಬೆಂಬಲಕ್ಕೆ ನಿಂತವರು, ಸಹಾಯ ಮಾಡುವವರು, ವಾಹನ ಕೊಡುವವರು ಯಾರು ಆರೇಸ್ಡ್‌ ಮಾಡಿದಾಗ ಸಹಾಯ ಮಾಡುವವರು ಲೀಗಲ್‌ ಸಪೋರ್ಟ್‌ ಮಾಡುವವರುವ ಅವರ ಮೇಲೋ ಸಹ ಕ್ರಮ ಕೈಗೊಳ್ಳಲಾಗುತ್ತದೆ ಜೊತೆಗೆ ಮುಖ್ಯವಾಗಿ ಡಾಕ್ಯುಮೆಂಟ್‌ ಮೆಂಟೆನ್‌ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗು ವುದು. ಎನ್‌ ಡಿಪಿಎಸ್‌‍ ನಲ್ಲಿ ಭಾಗಿಯಾದವರ ಬಿಡುಗಡೆಗಾಗಿ 2 ಲಕ್ಷ ಭದ್ರತಾ ಬಾಂಡ್‌ ಮೇಲೆ ಬಿಡುವ ಸೂಚನೆ ಸಹ ಕೊಡಲಾಗಿದೆ. ಮಾದಕ ವಸ್ತುಗಳ ಹಾಟ್‌್ಸಸ್ಪಾಟ್‌ ಆಗಿದ್ದು ಆ ಏರಿಯಾ ಮೇಲೆ ನಿಗಾ ಇಡಲಾಗಿದೆ. ಡ್ರಗ್‌ ಮಾರಾಟ, ಹೋಲ್‌ಸೇಲ್‌ ಮಾರಾಟ, ಸೇವನೆ ಕುರಿತು ಮಾಹಿತಿ ಕಲೆ ಹಾಕಲಾಗಿದೆ ಎಂದರು.

ನಮ ಸಬ್ಇನ್‌ಸ್ಪೆಕ್ಟರ್‌ ,ಎಸಿಪಿ, ಡಿಸಿಪಿಗಳು, ಪ್ರತಿ ಠಾಣೆಯಿಂದ 10 ಸಿಬ್ಬಂದಿ ತಂಡ ರಚನೆ ಮಾಡಲಾಗಿದ್ದು ಮುತುವರ್ಜಿ ಯಿಂದ ಕಾರ್ಯಾಚರಣೆ ಮಾಡತಾ ಇದ್ದಾರೆ.ಪ್ರತಿ ಪೊಲೀಸ್‌‍ ಠಾಣೆಯಲ್ಲಿ ಶೂನ್ಯ ಅಪರಾಧ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಲಾಗುತ್ತದೆ.

ಇನ್ನು ಗಾಂಜಾ, ಡ್ರಗ್‌್ಸ ಮೂಲ ಯಾವುದು ಅದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಯಾವ ಯಾವಾ ಏರಿಯಾಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.ಇನ್ನು ಶಾಲಾ ಕಾಲೇಜುಗಳ ಸುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ.

ಒಂದು ಸಿಸಿ ಟಿವಿ ಇದೆ. ಅಂದರೆ ಅಲ್ಲಿ ಎಷ್ಟೋ ಅಪರಾಧ ಕೃತ್ಯ ತಡೆಯಲು ಸಾಧ್ಯ ಎಂದ ಅವರು, ಯಾವುದೇ ಪ್ರಭಾವಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಗಾಂಜಾ, ಡ್ರಗ್‌್ಸ ಮಾರಾಟ, ಸೇವೆನೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದರು.

RELATED ARTICLES

Latest News