Friday, April 4, 2025
Homeರಾಷ್ಟ್ರೀಯ | National12 ಕೋಟಿ ಮೌಲ್ಯದ ಕೊಕೇನ್ ವಶ

12 ಕೋಟಿ ಮೌಲ್ಯದ ಕೊಕೇನ್ ವಶ

ಚೆನ್ನೈ, ಡಿ.16- ಇಲ್ಲಿನ ವಿಮಾನ ನಿಲ್ದಾಣದಲ್ಲಿ 12 ಕೋಟಿ ಮೌಲ್ಯದ 1,201 ಗ್ರಾಂ ಮಾದಕ ತೂಕದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಅಡಿಸ್ ಅಬಾಬಾದಿಂದ ಆಗಮಿಸುತ್ತಿದ್ದ ನೈಜಿರಿಯನ್ ಪ್ರಜೆಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಚೆನ್ನೈ ಏರ್‍ಪೋರ್ಟ್ ಕಸ್ಟಮ್ಸ ಅಧಿಕಾರಿಗಳು ತಿಳಿಸಿದ್ದಾರೆ.

ನೈಜಿರಿಯನ್ ಪ್ರಜೆಯ ಪರೀಕ್ಷೆಯ ಸಮಯದಲ್ಲಿ, 71 ಸಂಖ್ಯೆಯ ಹೈಪರ್‍ಡೆನ್ಸ್ ಸಿಲಿಂಡರಾಕಾರದ ಬಂಡಲ್‍ಗಳ ರೂಪದಲ್ಲಿ ನಿಷಿದ್ಧ ವಸ್ತು ಪತ್ತೆಯಾಗಿದೆ ಎಂದು ಕಸ್ಟಮ್ಸ ಪ್ರಧಾನ ಆಯುಕ್ತರ ಕಚೇರಿ ತಿಳಿಸಿದೆ.

ಬಂಧಿತ ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸಲು ಸಿಜೆಗೆ ಚೌಹಾಣ್ ಪತ್ರ

12 ಕೋಟಿ ಮೌಲ್ಯದ 1,201 ಗ್ರಾಂ ತೂಕದ ಕೊಕೇನ್ ಅನ್ನು ಕಸ್ಟಮ್ಸ ಆಕ್ಟ್ 1962 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕಸ್ಟಮ್ಸ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News