Saturday, May 4, 2024
Homeರಾಷ್ಟ್ರೀಯರಾಮಮಂದಿರದ ಪ್ರಾಣ ಪ್ರತಿಷ್ಠೆ: ಛತ್ತೀಸ್‍ಗಢದಲ್ಲಿ ಡ್ರೈ ಡೇ ಆಚರಣೆ

ರಾಮಮಂದಿರದ ಪ್ರಾಣ ಪ್ರತಿಷ್ಠೆ: ಛತ್ತೀಸ್‍ಗಢದಲ್ಲಿ ಡ್ರೈ ಡೇ ಆಚರಣೆ

ರಾಯ್‍ಪುರ, ಜ.3 (ಪಿಟಿಐ) ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ನಡೆಯಲಿರುವ ಜನವರಿ 22ರಂದು ಡ್ರೈ ಡೇ ಎಂದು ಘೋಷಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಛತ್ತೀಸ್‍ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.ನಿಮಗೆಲ್ಲರಿಗೂ ತಿಳಿದಿರುವಂತೆ ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ನಾವು ಉತ್ತಮ ಆಡಳಿತ ದಿನವನ್ನು ಆಚರಿಸುತ್ತಿದ್ದೇವೆ. ಶ್ರೀರಾಮ ನಮ್ಮ ಉತ್ತಮ ಆಡಳಿತದ ಮಾದರಿಯಾಗಿದ್ದಾರೆ ಎಂದು ಸಾಯಿ ತಿಳಿಸಿದರು.

ಛತ್ತೀಸ್‍ಗಢವು ಭಗವಾನ್ ರಾಮನ ನಾನಿಹಾಲ್ (ಭಗವಾನ್ ರಾಮನ ತಾಯಿಯ ಅಜ್ಜಿಯರ ಸ್ಥಳ) ಆಗಿರುವುದು ನಮ್ಮ ಅದೃಷ್ಟ ಮತ್ತು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆ ಜನವರಿ 22 ರಂದು ನಡೆಯುವುದು ಸಹ ಅದೃಷ್ಟ ಎಂದು ಅವರು ಹೇಳಿದರು. ಛತ್ತೀಸ್‍ಗಢದಾದ್ಯಂತ ಸಂತಸವಿದೆ. ಸಮಾರಂಭಕ್ಕಾಗಿ ರಾಜ್ಯದ ಅಕ್ಕಿ ಗಿರಣಿಗಾರರ ಸಂಘವು 300 ಮೆಟ್ರಿಕ್ ಟನ್ ಸುಗಂಧಭರಿತ ಅಕ್ಕಿಯನ್ನು ಅಯೋಧ್ಯೆಗೆ ಕಳುಹಿಸಿದೆ ಮತ್ತು ರಾಜ್ಯದ ಸಾಗುವಳಿದಾರರು ಉತ್ತರ ಪ್ರದೇಶದ ನಗರಕ್ಕೆ ತರಕಾರಿಗಳನ್ನು ರವಾನಿಸಲಿದ್ದಾರೆ ಎಂದು ಸಿಎಂ ಹೇಳಿದರು.

ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ನಾಳೆ ಚಾಲನೆ..

ಜನವರಿ 22 ರಂದು ರಾಜ್ಯಾದ್ಯಂತ ಹಬ್ಬದ ವಾತಾವರಣ ಇರಲಿದ್ದು, ದೀಪಾವಳಿಯಂತೆ ಆ ದಿನ ದಿಯಾಸ್ (ಮಣ್ಣಿನ ದೀಪಗಳು) ಬೆಳಗಲಾಗುತ್ತದೆ ಎಂದು ಅವರು ಹೇಳಿದರು.ಜನವರಿ 22 ರಂದು ಇಡೀ ರಾಜ್ಯದಲ್ಲಿ ಡ್ರೈ ಡೇ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾಯಿ ಹೇಳಿದರು. ಸಂಶೋಧನಾ ವಿದ್ವಾಂಸರ ಪ್ರಕಾರ, ಭಗವಾನ್ ರಾಮನು ಅಯೋಧ್ಯೆಯಿಂದ 14 ವರ್ಷಗಳ ವನವಾಸದಲ್ಲಿ ಛತ್ತೀಸ್‍ಗಢದಲ್ಲಿರುವ ಹಲವಾರು ಸ್ಥಳಗಳ ಮೂಲಕ ಹಾದು ಹೋಗಿದ್ದನು.

ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದಿಂದ 27 ಕಿ.ಮೀ ದೂರದಲ್ಲಿರುವ ಚಂದ್‍ಖುರಿ ಎಂಬ ಹಳ್ಳಿಯನ್ನು ರಾಮನ ತಾಯಿ ಮಾತಾ ಕೌಶಲ್ಯೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಗ್ರಾಮದಲ್ಲಿರುವ ಪುರಾತನ ಮಾತಾ ಕೌಶಲ್ಯ ದೇವಸ್ಥಾನಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನವೀಕರಣ ಮಾಡಲಾಗಿತ್ತು.

RELATED ARTICLES

Latest News