ಕೋಲಾರ,ಆ.7– ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ.ನಿನ್ನೆ ಸಂಜೆ ಪ್ರಾರಂಭವಾದ ಮಳೆ ಜೋರಾಗಿ ಒಂದು ಗಂಟೆಗಳ ಕಾಲ ಸುರಿದಿದ್ದು, ನಗರದ ಚಿಕ್ಕಬಳ್ಳಾಪುರ ರಸ್ತೆ ರೈಲ್ವೆ ಕೆಳ ಸೇತುವೆ, ಅಂತರಗಂಗೆ ರೈಲ್ವೆ ಕೆಳ ಸೇತುವೆ, ಚಿಕ್ಕಹಸಳ ಕೆಳಸೇತುವೆ ಕೆಳಗೆ ನೀರು ನಿಂತು ಸುಮಾರು ಒಂದು ತಾಸಿಗೂ ಅಧಿಕಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಸೇತುವೆ ಕೆಳಗೆ ಕೆಎಸ್‌ಆರ್‌ಟಿಸಿ ಬಸ್ ನಿಂತು ಹೋಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆಟೋ, ದ್ವಿಚಕ್ರವಾಹನಗಳ ಸವಾರರು ಆಶ್ರಯ ಪಡೆದುಕೊಳ್ಳಲು ಅವಕಾಶ ಇಲ್ಲದೆ ಮಳೆಯಲ್ಲೇ ನೆನೆಯಬೇಕಾಯಿತು.
ಗ್ರಾಮೀಣ ಪ್ರದೇಶದಲ್ಲಿಯು ಹೆಚ್ಚು ಮಳೆಯಾಗಿ ಪಪ್ಪಾಯ, ಟೊಮ್ಯಾಟೊ, ಬೀನ್ಸ್ , ದೊಡ್ಡಮೆಣಸಿನಕಾಯಿ ಬೆಳೆಗಳು ಹಾನಿಯಾಗಿವೆ. ಟೊಮ್ಯಾಟೊ ಕೊಯ್ಲು ಮಾಡಿರುವ ರೈತರು ಮಾರುಕಟ್ಟೆಗೆ ಸಾಗಿಸಲು ಹರಸಾಹಸಪಟ್ಟಿದರು. ಟೊಮ್ಯಾಟೊ ವಾಹನಗಳು ಸಿಕ್ಕಾಕಿಕೊಂಡು ತೆರವುಗೊಳಿಸಲು ಪರಿತಪ್ಪಿಸಿದರು.
ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದ ಹಿನ್ನಲೆಯಲ್ಲಿ ನೀರು ರಸ್ತೆಯ ಮೇಲೆ ಹರಿಯಿತು, ಇದರಿಂದಾಗಿ ರಸ್ತೆಯಲ್ಲಿನ ಗುಂಡಿಗಳು ಸರಿಯಾಗಿ ಗೋಚರಿಸದೆ ಸಂಕಷ್ಟಕ್ಕೆ ಸಿಲುಕಿದರು. ಇನ್ನು ಯುಜಿಡಿ ಮ್ಯಾನ್ಯುಯಲ್ ಹೊಲ್‌ಗಳು ಹಾನಿಯಾಗಿದ್ದು ಕೊಳಚೆ ನೀರು ರಸ್ತೆಗೆ ಹರಿಯಿತು.ಗಲ್ ಪೇಟೆ ಪೊಲೀಸರು ವಾಹನ ಸಂಚಾರ ನಿವಾರಣೆ ಹಾಗೂ ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿ ನೀರು ಖಾಲಿ ಮಾಡಿಸಲು ಕ್ರಮ ಕೈಗೊಂಡರು.