Saturday, November 1, 2025
Homeಮನರಂಜನೆದುನಿಯಾ ವಿಜಯ್‌ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ದುನಿಯಾ ವಿಜಯ್‌ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು, ಜೂ.13- ತಮ ಪತ್ನಿ ನಾಗರತ್ನರಿಗೆ ವಿಚ್ಛೇದನ ಕುರಿತು ದುನಿಯಾ ವಿಜಯ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಇಂದು ವಜಾಗೊಳಿಸಿ ಆದೇಶ ಹೊರಡಿಸಿದೆ. ದುನಿಯಾ ವಿಜಯ್‌ ಅವರು 2013ರಲ್ಲಿ ನಾಗರತ್ನಗೆ ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ನಂತರ ಇಬ್ಬರ ನಡುವೆ ರಾಜಿ- ಸಂಧಾನಗಳನ್ನು ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಪ್ತೇಷ್ಟರು ಮುಂದಾಗಿದ್ದರು. ನಂತರ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಒಟ್ಟಿಗೆ ಬಾಳುವ ನಿರ್ಧಾರವನ್ನು ದುನಿಯಾ ವಿಜಯ್‌ ಹಾಗೂ ನಾಗರತ್ನ ತೆಗೆದುಕೊಂಡಿದ್ದರು.

- Advertisement -

ಆದರೆ ಮತ್ತೆ ಸಂಸಾರ ಹಳಿ ತಪ್ಪಿದ ನಂತರ ಮತ್ತೆ ಡೈವೋರ್ಸ್‌ ಕೊಡುವುದಾಗಿ ವಿಜಯ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. 2019ರಲ್ಲಿ ನಟ ದುನಿಯಾ ವಿಜಯ್‌ ವಿರುದ್ಧ ಪತ್ನಿ ನಾಗರತ್ನ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ವಿಚಾರಣೆಗೆ ಹಾಜರಾಗಿದ್ದ ವಿಜಯ್‌ ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.

ನಾಗರತ್ನಗೆ ಜೀವನಾಂಶ ಕೊಟ್ಟಿದ್ದೇನೆ ಎಂದು ದುನಿಯಾ ವಿಜಯ್‌ ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ನನಗೆ ಯಾವುದೇ ಜೀವನಾಂಶ ನೀಡಿಲ್ಲ ಎಂದು ನಾಗರತ್ನ ಹೇಳಿದ್ದರು. ಆದರೆ ನಂತರವೂ ತಮ್ಮ ಪತ್ನಿಗೆ ವಿಚ್ಛೇದನ ಕೊಡುವುದಾಗಿ ದುನಿಯಾ ವಿಜಯ್‌ ಅರ್ಜಿ ಸಲ್ಲಿಸಿದ್ದು.

ಇಂದು ಮಧ್ಯಾಹ್ನ 3 ಗಂಟೆಗೆ ಹೈಕೋರ್ಟ್‌ ದುನಿಯಾ ವಿಜಯ್‌ ಹಾಗೂ ನಾಗರತ್ನ ಅವರ ವಿಚ್ಛೇದನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ವಿಜಯ್‌ ಸಲ್ಲಿಸಿದ್ದ ಡೈವೋರ್ಸ್‌ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

- Advertisement -
RELATED ARTICLES

Latest News