ಅಹಮದಾಬಾದ್, ಮೇ 20 – ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10.30ರ ಸಂದರ್ಭದಲ್ಲಿ 3.4 ತೀವ್ರತೆಯ ಭೂ ಕಂಪನ ಸಂಭವಿಸಿದೆ .ಭೂಕಂಪನದ ಪ್ರಭಾವದಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನದ ಕೇಂದ್ರಬಿಂದು 60 ಕಿಮೀ ಉತ್ತರ-ವಾಯವ್ಯಕ್ಕೆ ಲಖ್ಪತ್ ಬಳಿ 4.1 ಕಿಲೋಮೀಟರ್ ಆಳದಲ್ಲಿ ಸಮಭವಿಸಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಈ ತಿಂಗಳಿನಲ್ಲಿ ಇದುವರೆಗೆ ರಾಜ್ಯದ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ 3 ಮತ್ತು 4 ರ ನಡುವೆ ದಾಖಲಾದ ಐದನೇ ಕಂಪನವಾಗಿದೆ ಎಂದು ಖ ಡೇಟಾ ತೋರಿಸಿದೆ.