Sunday, September 8, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರದ ಹಿಂಗೋಲಿಯಲ್ಲಿ ಭೂಕಂಪನ

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಭೂಕಂಪನ

ಛತ್ರಪತಿ ಸಂಭಾಜಿನಗರ, ಜು.10 (ಪಿಟಿಐ) ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ನಾಂದೇಡ್‌, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ವಾಶಿಂ ಜಿಲ್ಲೆಗಳಲ್ಲಿಯೂ ಇದರ ಪರಿಣಾಮ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂದು ಬೆಳಗ್ಗೆ 7.14ಕ್ಕೆ ಭೂಕಂಪನದ ಕೇಂದ್ರ ಬಿಂದು ಹಿಂಗೋಳಿಯ ಕಾಳಮ್ನೂರಿ ತಾಲೂಕಿನ ರಾಮೇಶ್ವರ ತಾಂಡಾದಲ್ಲಿ ದಾಖಲಾಗಿದೆ ಎಂದು ನಾಂದೇಡ್‌ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಹಿಂಗೋಲಿ, ನಾಂದೇಡ್‌, ಪರ್ಭಾನಿ, ಛತ್ರಪತಿ ಸಂಭಾಜಿನಗರ (ಎಲ್ಲವೂ ಮರಾಠವಾಡ ಪ್ರದೇಶದಲ್ಲಿ) ಮತ್ತು ವಾಶಿಮ್‌ (ವಿದರ್ಭದಲ್ಲಿ) ಭಾಗಗಳಲ್ಲಿ ಕಂಡುಬಂದಿದೆ.

ನಾಂದೇಡ್‌ ಜಿಲ್ಲಾಡಳಿತವು ತಮ ಮನೆಗಳ ಮೇಲ್ಛಾವಣಿಯ ಮೇಲೆ ಇರಿಸಲಾಗಿರುವ ಕಲ್ಲುಗಳನ್ನು ತೆಗೆಯುವಂತೆ ಜನರಿಗೆ ಮನವಿ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ, ಹಿಂಗೋಳಿಯ ಕಲನೂರಿ ತಾಲೂಕಿನ ಜಂಬ ಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದುವಿನೊಂದಿಗೆ ಈ ಪ್ರದೇಶದಲ್ಲಿ 4.5 ಮತ್ತು 3.6 ತೀವ್ರತೆಯ ಕಂಪನಗಳು ದಾಖಲಾಗಿವೆ.

RELATED ARTICLES

Latest News