Tuesday, July 23, 2024
Homeರಾಷ್ಟ್ರೀಯ40 ವರ್ಷಗಳ ನಂತರ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ

40 ವರ್ಷಗಳ ನಂತರ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ

ನವದೆಹಲಿ,ಜು.10– ನಲವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಸ್ಟ್ರಿಯಾಕ್ಕೆ ಆಗಮಿಸಿದ್ದಾರೆ. ಮಹತ್ವದ ರಷ್ಯಾ ಭೇಟಿಯನ್ನು ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ ಆಸ್ಟ್ರಿಯಾ ತಲುಪಿದ್ದಾರೆ. 40 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದರೂ ಹೊರತುಪಡಿಸಿದರೆ ಇದುವರೆಗೂ ಯಾವೊಬ್ಬ ಪ್ರಧಾನಮಂತ್ರಿಗಳು ಆಸ್ಟ್ರಿಯಾಗೆ ಭೇಟಿ ನೀಡಿರಲಿಲ್ಲ.

ವಿಯೆನ್ನಾದಲ್ಲಿ ತಂಗಿರುವ ಪ್ರಧಾನಿ ಮೋದಿ ಅವರು ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್‌ ವ್ಯಾನ್‌ ಡೆರ್‌ ಬೆಲ್ಲೆನ್‌ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಚಾನ್ಸೆಲರ್‌ ನೆಹಮರ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ಭಾರತ ಮತ್ತು ಆಸ್ಟ್ರಿಯಾದ ವ್ಯಾಪಾರ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಉಭಯ ದೇಶಗಳು ತಮ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸುವ ಮಾರ್ಗಗಳನ್ನು ಅನ್ವೇಷಿಸಲಿವೆ ಮತ್ತು ವಿವಿಧ ಭೌಗೋಳಿಕ ರಾಜಕೀಯ ಸವಾಲುಗಳ ಮೇಲೆ ನಿಕಟ ಸಹಕಾರವನ್ನು ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಇಂದು ವಿಯೆನ್ನಾದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಆಸ್ಟ್ರಿಯಾಕ್ಕೆ ಭೇಟಿ ನೀಡುವ ಮೊದಲು, ಪ್ರಧಾನಿ ಮೋದಿ ಅವರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮದ ಹಂಚಿಕೆಯ ಮೌಲ್ಯಗಳು ಎರಡು ದೇಶಗಳು ಸದಾ ನಿಕಟ ಪಾಲುದಾರಿಕೆಯನ್ನು ನಿರ್ಮಿಸುವ ತಳಹದಿಯನ್ನು ರೂಪಿಸುತ್ತವೆ ಎಂದು ಹೇಳಿದರು.

2021 ರಲ್ಲಿ, ಗ್ಲಾಸ್ಗೋದಲ್ಲಿ ಪ್ರಧಾನಿ ಮೋದಿ ಅವರು ಈಗ ದೇಶದ ವಿದೇಶಾಂಗ ಸಚಿವರಾಗಿರುವ ಆಗಿನ ಆಸ್ಟ್ರಿಯಾದ ಚಾನ್ಸೆಲರ್‌ ಅಲೆಕ್ಸಾಂಡರ್‌ ಶಾಲೆನ್‌ಬರ್ಗ್‌ ಅವರೊಂದಿಗೆ ಚರ್ಚೆ ನಡೆಸಿದ್ದರು.

ಕಳೆದ ವಾರ, ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಅವರು ಆಸ್ಟ್ರಿಯಾವನ್ನು ಪ್ರಮುಖ ಮಧ್ಯ ಯುರೋಪಿಯನ್‌ ದೇಶ ಎಂದು ಕರೆದರು, ಇದು ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಉನ್ನತ ತಂತ್ರಜ್ಞಾನ ಕ್ಷೇತ್ರಗಳು, ಸ್ಟಾರ್ಟ್‌-ಅಪ್‌ ಕ್ಷೇತ್ರಗಳು, ಮಾಧ್ಯಮ ಮತ್ತು ಮನರಂಜನೆಯಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ

RELATED ARTICLES

Latest News