Thursday, November 21, 2024
Homeರಾಷ್ಟ್ರೀಯ | Nationalಶಿಲ್ಪಾಶೆಟ್ಟಿ ದಂಪತಿಯ 98 ಕೋಟಿ ರೂ.ಆಸ್ತಿ ಜಪ್ತಿ

ಶಿಲ್ಪಾಶೆಟ್ಟಿ ದಂಪತಿಯ 98 ಕೋಟಿ ರೂ.ಆಸ್ತಿ ಜಪ್ತಿ

ಮುಂಬೈ,ಏ.18- ಬಾಲಿವುಡ್ನ ಸ್ಟಾರ್ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿಲ್ಪಾ ಹಾಗೂ ಪತಿ ರಾಜ್ ಕುಂದ್ರಾಗೆ ಸೇರಿದ ಸುಮಾರು 98 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಿಟ್ಕಾಯಿನ್ ಪೊಂಜಿ ಹಗರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ 97.79 ಕೋಟಿ ಮËಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ), 2002ರ ನಿಬಂಧನೆಗಳಡಿ ಇಡಿ ಜಪ್ತಿ ಮಾಡಿದೆ. ಜುಹುದಲ್ಲಿರುವ ಅವರ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ, ರಾಜ್ ಕುಂದ್ರಾ ಹೆಸರಲ್ಲಿರುವ ಶೇರುಗಳನ್ನು ಜಪ್ತಿ ಮಾಡಲಾಗಿದೆ.

ಒಂದು ವೇರಿಯೇಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಆರೋಪಿಗಳು – ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ದಾಖಲಿಸಿದ ಬಹು ಎಫ್ಐಆರ್ಗಳನ್ನು ಆಧರಿಸಿ ಇಡಿ ತನಿಖೆ ಪ್ರಾರಂಭಿಸಿತ್ತು.

ಆರೋಪಿಗಳು ಬಿಟ್ ಕಾಯಿನ್ ರೂಪದಲ್ಲಿ ತಿಂಗಳಿಗೆ ಶೇ.10ರಷ್ಟು ರಿಟರ್ನ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಜನರಿಂದ ಬಿಟ್ ಕಾಯಿನ್ ರೂಪದಲ್ಲಿ (2017ರಲ್ಲಿಯೇ 6,600 ಕೋಟಿ ರೂ. ಮೌಲ್ಯ) ಭಾರೀ ಮೊತ್ತದ ಹಣ ಸಂಗ್ರಹಿಸಿದ್ದರು.

ಸಂಗ್ರಹಿಸಿದ ಬಿಟ್ಕಾಯಿನ್ಗಳಲ್ಲಿ ಹೂಡಿಕೆದಾರರು ಕ್ರಿಪೊ್ರೀ ಸ್ವತ್ತುಗಳಲ್ಲಿ ಭಾರೀ ಆದಾಯವನ್ನು ಪಡೆಯಬೇಕಿತ್ತು. ಆದರೆ ಪ್ರವರ್ತಕರು ಹೂಡಿಕೆದಾರರನ್ನು ವಂಚಿಸಿದ್ದಾರೆ ಮತ್ತು ಅಸ್ಪಷ್ಟ ಆನ್ಲೈನ್ ವ್ಯಾಲೆಟ್ಗಳಲ್ಲಿ ಅಕ್ರಮವಾಗಿ ಗಳಿಸಿದ ಬಿಟ್ಕಾಯಿನ್ಗಳನ್ನು ಮರೆಮಾಡುತ್ತಿದ್ದಾರೆ ಎಂಬ ಆರೋಪಿಸಲಾಗಿದೆ.

RELATED ARTICLES

Latest News