Thursday, July 10, 2025
Homeರಾಜ್ಯಬಾಗೇಪಲ್ಲಿ ಶಾಸಕ ಎಸ್‌‍.ಎನ್‌.ಸುಬ್ಬಾರೆಡ್ಡಿ ಮನೆ ಮೇಲೆ ಇಡಿ ದಾಳಿ

ಬಾಗೇಪಲ್ಲಿ ಶಾಸಕ ಎಸ್‌‍.ಎನ್‌.ಸುಬ್ಬಾರೆಡ್ಡಿ ಮನೆ ಮೇಲೆ ಇಡಿ ದಾಳಿ

ED raids Bagepalli MLA S.N. Subbareddy's house

ಬೆಂಗಳೂರು, ಜು. 10 (ಪಿಟಿಐ) ಬಹಿರಂಗಪಡಿಸದ ವಿದೇಶಿ ಆಸ್ತಿಗಳನ್ನು ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ಶಾಸಕ ಎಸ್‌‍.ಎನ್‌.ಸುಬ್ಬಾರೆಡ್ಡಿ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಿಢೀರ್‌ ದಾಳಿ ನಡೆಸಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ತನಿಖೆಯಲ್ಲಿ ಸುಬ್ಬಾ ರೆಡ್ಡಿ ಮತ್ತು ಇತರ ಕೆಲವರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಶಾಸಕರ ನಿವಾಸ ಸೇರಿದಂತೆ ಬೆಂಗಳೂರಿನ ಕನಿಷ್ಠ ಐದು ಸ್ಥಳಗಳನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್‌ 37 ರ ಅಡಿಯಲ್ಲಿ ಒಳಪಡಿಸಲಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಬಹಿರಂಗಪಡಿಸದ ವಿದೇಶಿ ಆಸ್ತಿಗಳ ಆರೋಪಗಳಿಗೆ ತನಿಖೆ ಸಂಬಂಧಿಸಿದೆ.ಶಾಸಕರು ವಿದೇಶಿ ಬ್ಯಾಂಕುಗಳಲ್ಲಿ ಅಕೌಂಟ್‌್ಸ ಹೊಂದಿದ್ದಾರೆ ಎನ್ನಲಾದ ಕೆಲವು ಠೇವಣಿಗಳು, ಮಲೇಷ್ಯಾ, ಹಾಂಗ್‌ ಕಾಂಗ್‌‍, ಜರ್ಮನಿ ಇತ್ಯಾದಿಗಳಲ್ಲಿ ವಾಹನ ಖರೀದಿ ಮತ್ತು ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವುದು ಇಡಿ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು, ಪ್ರತಿಕ್ರಿಯೆಗಾಗಿ ಅವರನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಿಲ್ಲ.

RELATED ARTICLES

Latest News