Sunday, September 8, 2024
Homeರಾಷ್ಟ್ರೀಯ | Nationalಹರಿಯಾಣ ಕಾಂಗ್ರೆಸ್‌‍ ಶಾಸಕನ ಸಂಸ್ಥೆಗಳ ಮೇಲೆ ಇಡಿ ದಾಳಿ

ಹರಿಯಾಣ ಕಾಂಗ್ರೆಸ್‌‍ ಶಾಸಕನ ಸಂಸ್ಥೆಗಳ ಮೇಲೆ ಇಡಿ ದಾಳಿ

ನವದೆಹಲಿ, ಜು.18 (ಪಿಟಿಐ) ಈ ಹಿಂದೆ ನಡೆದಿದ್ದ 1,392 ಕೋಟಿ ರೂ.ಗಳ ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮನಿ ಲಾಂಡರಿಂಗ್‌ ತನಿಖೆಯ ಭಾಗವಾಗಿ ಹರಿಯಾಣ ಕಾಂಗ್ರೆಸ್‌‍ ಶಾಸಕ ರಾವ್‌ ದಾನ್‌ ಸಿಂಗ್‌ ಅವರಿಗೆ ಸೇರಿದ್ದ ಲೋಹ ತಯಾರಿಕೆ ಕಂಪನಿ ಮತ್ತು ಅದರ ಪ್ರವರ್ತಕರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಇಂದು ಶೋಧ ನಡೆಸಿದೆ.

ಹರಿಯಾಣದ ಮಹೇಂದ್ರಗಢ್‌, ಬಹದ್ದೂರ್‌ಗಢ್‌ ಮತ್ತು ಗುರುಗ್ರಾಮ್‌‍, ದೆಹಲಿ ಮತ್ತು ಜೆಮ್‌ಶೆಡ್‌ಪುರ ಸೇರಿದಂತೆ ಸುಮಾರು 15 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲಕ್ಕೆ ಮುಗಿ ಬಿದ್ದಿದ್ದಾರೆ. ಇದರಲ್ಲಿ ಮಹೇಂದ್ರಗಢ ಕ್ಷೇತ್ರದ 65 ವರ್ಷದ ಶಾಸಕ, ಅವರ ಪುತ್ರ ಅಕ್ಷತ್‌ ಸಿಂಗ್‌ಗೆ ಸೇರಿದ ಕಂಪನಿ ಅಲೈಡ್‌ ಸ್ಟ್ರಿಪ್ಸ್ ಲಿಮಿಟೆಡ್‌ (ಎಎಸ್‌‍ಎಲ್‌‍) ಮತ್ತು ಅದರ ಪ್ರವರ್ತಕರಾದ ಮೊಹಿಂದರ್‌ ಅಗರವಾಲ್‌‍, ಗೌರವ್‌ ಅಗರವಾಲ್‌ ಮತ್ತು ಇನ್ನೂ ಕೆಲವರ ಆವರಣಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯು 1,392 ಕೋಟಿ ರೂಪಾಯಿಗಳ ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದ್ದು, 2022 ರಲ್ಲಿ ಸಿಬಿಐನಿಂದ ಪ್ರಕರಣ ದಾಖಲಾಗಿತ್ತು. ರಾವ್‌ ಡಾನ್‌ ಸಿಂಗ್‌ ಅವರ ಕುಟುಂಬ ಮತ್ತು ಅವರ ಕಂಪನಿಗಳು ಎಎಸ್‌‍ಎಲ್‌ನಿಂದ ಸಾಲದ ಹಣವನ್ನು ತೆಗೆದುಕೊಂಡಿವೆ ಆದರೆ ಹಿಂತಿರುಗಿಸಲಿಲ್ಲ ಮತ್ತು ನಂತರ ಈ ಹಣವನ್ನು ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News