Monday, August 25, 2025
Homeರಾಷ್ಟ್ರೀಯ | Nationalಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ : ಟಿಎಂಸಿ ಶಾಸಕನಿಗೆ ಇ.ಡಿ.ಶಾಕ್‌

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ : ಟಿಎಂಸಿ ಶಾಸಕನಿಗೆ ಇ.ಡಿ.ಶಾಕ್‌

ED raids Trinamool MLA's home, he scales wall and tries to flee; arrested

ಕೋಲ್ಕತ್ತಾ,ಆ.25- ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಇ.ಡಿ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಟಿಎಂಸಿ ಶಾಸಕ ಜಿಬನ್‌ ಕೃಷ್ಣ ಸಹಾ ಅವರ ನಿವಾಸ ಸೇರಿ ಹಲವೆಡೆ ದಾಳಿ ನಡೆಸುತ್ತಿದೆ.

ಇಡಿ ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ,ಶಾಸಕರು ಮನೆಯಿಂದ ಪರಾರಿಯಾಗಲು ಹಿಂದಿನ ಬಾಗಿಲಿನಿಂದ ಹೊರಗೆ ಓಡಿ ಕಂಪೌಂಡ್‌ ಹಾರಿದ್ದಾರೆ.ನಂತರ ಇದನ್ನು ಕಂಡ ಪೊಲೀಸರು,ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಹಿಡಿದು ಬಂಧಿಸಲಾಗಿದೆವಿಚಾರಣೆ ನಡೆಸುತ್ತಿದ್ದಾರೆ ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ.

ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಿರ್ಭಮ್‌ ಜಿಲ್ಲೆಯ ವ್‌ವ್ಯಕ್ತಿಯೊಬ್ಬ ನಡೆಸಿದ ಹಣಕಾಸಿನ ವಹಿವಾಟಿನ ಮಾಹಿತಿಯ ಆಧಾರದ ಮೇಲೆ, ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದರು.ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಈ ಹಿಂದೆ ಸಹಾ ಅವರ ಪತ್ನಿಯನ್ನು ವಿಚಾರಣೆ ನಡೆಸಿತ್ತು.

ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಏಪ್ರಿಲ್‌ 2023 ರಲ್ಲಿ ಸಹಾ ಅವರನ್ನು ಬಂಧಿಸಿತ್ತು. ಈ ವರ್ಷದ ಮೇ ತಿಂಗಳಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು.

RELATED ARTICLES

Latest News