ಕೋಲ್ಕತ್ತಾ, ಅ.26- ಬಹುಕೋಟಿ ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿವಾಸದಲ್ಲಿ ಇಂದು ಮುಂಜಾನೆ ಶೋಧ ಆರಂಭಿಸಿದ್ದಾರೆ.
ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಪ್ರಸ್ತುತ ರಾಜ್ಯ ಅರಣ್ಯ ಸಚಿವರಾಗಿರುವ ಮಲ್ಲಿಕ್ ಅವರಿಗೆ ಸೇರಿದ ಎರಡು ಫ್ಲಾಟ್‍ಗಳ ಮೇಲೆ ಕೇಂದ್ರೀಯ ಪಡೆಗಳ ತಂಡದಿಂದ ಇಡಿ ದಾಳಿ ನಡೆಸಲಾಗಿದೆ ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಆಧಾರ್, ಡಿಎಲ್, ಮತದಾರರ ಗುರುತಿನ ಚೀಟಿ ಪ್ರಕರಣ : ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
ಮಲ್ಲಿಕ್ ಅವರು ಆಹಾರ ಸಚಿವರಾಗಿದ್ದಾಗ ಅವರ ಮಾಜಿ ಆಪ್ತ ಸಹಾಯಕರ ನಿವಾಸಗಳು ಸೇರಿದಂತೆ ಇತರ ಎಂಟು ಫ್ಲಾಟ್‍ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇಂದು ದಾಳಿಯ ಸಮಯದಲ್ಲಿ ಮನೆಯಲ್ಲಿ ಸಚಿವರು ಇರಲಿಲ್ಲ ನಂತರ ಮಾಹಿತಿ ತಿಳಿದು ಬಂದು ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ ಒಳಗೆ ಎಂಟು ಅಧಿಕಾರಿಗಳು ಶೋಧನೆಯಲ್ಲಿದ್ದರು. ಸವಿವರ ಮನೆ ಸೇರಿ ಹಲವು ಸ್ಥಳಗಳಲ್ಲಿಯೂ ಶೋಧ ನಡೆಸುತ್ತಿದ್ದೇವೆ ಎಂದು ಇಡಿ ತಿಳಿಸಿದೆ.
ಕೇಂದ್ರ ತನಿಖಾ ಸಂಸ್ಥೆಯು ಈಗಾಗಲೇ ಸಚಿವ ಮಲ್ಲಿಕ್‍ಗೆ ನಿಕಟ ಸಂಪರ್ಕ ಹೊಂದಿರುವ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ ತನಿಖೆ ನಡೆಸುತ್ತಿದ್ದೆ ಎಂದು ಅಧಿಕಾರಿ ತಿಳಿಸಿದ್ದಾರೆ.