Thursday, June 20, 2024
Homeರಾಜ್ಯವಾಲ್ಮೀಕಿ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಇಡಿ

ವಾಲ್ಮೀಕಿ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಇಡಿ

ಬೆಂಗಳೂರು,ಜೂ.6- ಮಹರ್ಷಿ ವಾಲೀಕಿ ಪರಿಶಿಷ್ಟ ವರ್ಗ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಅವ್ಯವಹಾರ ಕುರಿತಂತೆ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ನೀಡಿರುವ ದೂರನ್ನು ಜಾರಿ ನಿರ್ದೇಶನಾಲಯ ( ಇಡಿ) ಗಂಭೀರವಾಗಿ ಪರಿಗಣಿಸಿದೆ.

ಈ ಅವ್ಯವಹಾರದ ಪ್ರಮುಖ ದಾಖಲೆಗಳನ್ನು ಎನ್‌.ಆರ್‌.ರಮೇಶ್‌ ಅವರು ಇಡಿ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ರಾಜ್ಯ ಆರ್ಥಿಕ ಅಪರಾಧ ಪ್ರಕರಣವಾಗಿರುವ ಈ ಬಹತ್‌ ಹಗರಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ. ನಾಗೇಂದ್ರ, ಅವರ ಆಪ್ತ ನಾಗರಾಜ್‌ ಸೇರಿದಂತೆ ಕರ್ನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಜೆ. ಜಿ. ಪದನಾಭ್‌,ಲೆಕ್ಕಾಧಿಕಾರಿ ಪರಶುರಾಮ್‌ ಜಿ ದುರಗಣ್ಣನವರ್‌ ಮತು ಯೂನಿಯನ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕಿ ಶುಚಿಸಿತಾ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆದೇಶವಿಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆಯಿಂದ ಪಕ್ಕದ ತೆಲಂಗಾಣ ರಾಜ್ಯದ ಖಾಸಗಿ ಬ್ಯಾಂಕಿನ ಖಾಸಗಿ ಸಂಸ್ಥೆಗಳ ಖಾತೆಗಳಿಗೆ 89.62 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವರ್ಗಾವಣೆಯಾಗಲೂ ಸಾಧ್ಯವೇ ಇರುವುದಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹಣಕಾಸು ಖಾತೆಯನ್ನೂ ಸಹ ಹೊಂದಿರುವುದರಿಂದ, ಅವರ ಆದೇಶವಿಲ್ಲದೆ ಅಥವಾ ಅವರ ಗಮನಕ್ಕೆ ಬಾರದೆ ಈ ಅಕ್ರಮ್‌ ಹಣ ವರ್ಗಾವಣೆ ಕಾರ್ಯ ನಡೆದಿರುವುದು ಸಾಧ್ಯವಿಲ್ಲ.

ಹೀಗಾಗಿ ಸಿದ್ಧರಾಮಯ್ಯ, ಸಚಿವ ಬಿ. ನಾಗೇಂದ್ರ,ನಾಗರಾಜ್‌‍, ಪದನಾಭ್‌‍, . ಪರಶುರಾಮ್‌ ಜಿ ದುರಗಣ್ಣನವರ್‌ , ಶುಚಿಸಿತಾ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಪ್ರಮುಖರ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ನಕಲಿ ದಾಖಲೆ ತಯಾರಿಕೆ, ಅಕ್ರಮ ಹಣ ವರ್ಗಾವಣೆ ಹಾಗೂ ಸರ್ಕಾರಿ ಹಣ ದುರ್ಬಳಕೆ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ದಲ್ಲಿ ದಾಖಲೆಗಳ ಸಹಿತ ರಮೇಶ್‌ ದೂರು ದಾಖಲಿಸಿದ್ದಾರೆ.

ಹಾಗೆಯೇ, ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವದ್ಧಿ ನಿಗಮ ದಲ್ಲಿ ಹಣಕಾಸು ಅಕ್ರಮಗಳು ನಡೆದಿರುವಂತೆಯೇ ರಾಜ್ಯ ಸರ್ಕಾರದ ಇನ್ನುಳಿದ ನಿಗಮಗಳಲ್ಲಿಯೂ ಸಹ ಅಕ್ರಮ ಹಣ ವರ್ಗಾವಣೆ ನಡೆದಿರುವ ಸಾಧ್ಯತೆಗಳು ಇರುವುದರಿಂದ ಕೂಡಲೇ ಎಲ್ಲಾ ನಿಗಮಗಳ ಖಾತೆಗಳನ್ನು ತಮ ವಶಕ್ಕೆ ಪಡೆದು ತನಿಖೆ ನಡೆಸಬೇಕೆಂದೂ ಸಹ ಜಾರಿ ನಿರ್ದೇಶನಾಲಯಕ್ಕೆ ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News