Thursday, September 19, 2024
Homeರಾಷ್ಟ್ರೀಯ | Nationalಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಲ್ಲೇ ಕೈದಿ ಕೊಲೆ

ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಲ್ಲೇ ಕೈದಿ ಕೊಲೆ

ಕಣ್ಣೂರು (ಕೇರಳ), ಆ.8- ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಗಲಾಟೆಯಲ್ಲಿ ಕೈದಿಯೊಬ್ಬನ ಕೊಲೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೊಲ್ಯಾಡ್ ಮೂಲದ ಜೀವಾವ„ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕರುಣಾಕರನ್ (86) ಕೊಲೆಯಾದವನಾಗಿದ್ದು, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಸಹ ಕೈದಿಯೊಬ್ಬರು ಥಳಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪಾಲಕ್ಕಾಡ್ ಮೂಲದ ವೇಲಾಯುಧನ್ ಅಲಿಯಾಸ್ ಅಯ್ಯಪ್ಪನ್ ಎಂಬಾತನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಣ್ಣೂರು ಟೌನ್ ಇನ್ಸ್‍ಪೆಕ್ಟರ್ ಶ್ರೀಜಿತ್ ಕೊಡೇರಿ ತಿಳಿಸಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು ಗಲಾಟೆ ನಂತರ ಕರುಣಾಕರನ್ ಶವವನ್ನು ಬಾರಿಕೇಡ್‍ನಲ್ಲಿ ಇಡಲಾಗಿತ್ತು.ಯಾನು ಆಗಿಲ್ಲದಂತೆ ಕೈದಿಗಳು ಸಮ್ಮುನಿದ್ದರು.ಮೈಮೇಲೆ ಗಾಯ ನೋಡಿ ಜೈಲು ಸಿಬ್ಬಂಧಿ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿತ್ತು.

ನಂತರ ಶವವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆದು ವರದಿಯು ಬಂದಾಗ ಥಳಿತದಿಂದ ಉಂಟಾದ ಗಾಯಗಳಿಂದ ಸಾವು ಸಂಭವಿಸಿದೆ ಎಂದು ದೃಢಪಡಿಸಿದೆ.ನಂತರ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ವೇಲಾಯುಧನ್‍ಈಗ ಮತ್ತೊಂದು ಕೊಲೆ ಆರೋಪಿಯಾಗಿದ್ದಾನೆ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

RELATED ARTICLES

Latest News