Wednesday, May 1, 2024
Homeರಾಷ್ಟ್ರೀಯಆನ್‍ಲೈನ್ ಹಣ ವರ್ಗಾವಣೆ ಮೇಲೆ ಚು.ಆಯೋಗ ಹದ್ದಿನ ಕಣ್ಣು

ಆನ್‍ಲೈನ್ ಹಣ ವರ್ಗಾವಣೆ ಮೇಲೆ ಚು.ಆಯೋಗ ಹದ್ದಿನ ಕಣ್ಣು

ನವದೆಹಲಿ,ಮಾ.18 – ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಆನ್‍ಲೈನ್ ಮೂಲಕ ಹಣದ ಆಮಿಷವೊಡ್ಡುವವರ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಫೋನ್ ಪೇ, ಪೇಟಿಎಂ ಸೇರಿದಂತೆ ಯಾವುದೇ ರೀತಿಯ ಯುಪಿಐ ಆಪ್‍ಗಳ ಮೂಲಕ ರವಾನೆಯಾಗುವ ಹಣಕಾಸು ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾವಹಿಸಿದೆ. ಮತದಾರರಿಗೆ ಯಾವುದೇ ಸ್ವರೂಪದಲ್ಲಿ ಆಮಿಷ ಒಡ್ಡಿ ಮತಗಳನ್ನು ಸೆಳೆಯಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಇಷ್ಟಾದರೂ ಕೆಲವು ರಾಜಕಾರಣಿಗಳು ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಹಣ ರವಾನೆ ಮಾಡುತ್ತಿದ್ದಾರೆ. ಅದರಲ್ಲೂ ತಾಂತ್ರಿಕವಾಗಿ ಸಾಕಷ್ಟು ಜ್ಞಾನ ಸಂಪಾದಿಸಿರುವ ಬೆಂಗಳೂರು ಜನತೆಗೆ ವಿನೂತನ ತಂತ್ರಜ್ಞಾನದ ಮೂಲಕ ಹಣ ರವಾನಿಸುವುದು ಕಷ್ಟವೇನಲ್ಲ. ಹೀಗಾಗಿ, ಚುನಾವಣಾ ಆಯೋಗ ಇದಕ್ಕಾಗಿ ಪ್ರತ್ಯೇಕ ತಂಡವನ್ನೇ ರಚನೆ ಮಾಡಿ ನಿಗಾ ವಹಿಸಿದೆ.

28 ಸ್ಥಾನಗಳನ್ನು ಗೆಲ್ಲುವಲ್ಲಿ ವಿಜಯೇಂದ್ರ ಯಶಸ್ವಿಯಾಗಲಿ: ಈಶ್ವರಪ್ಪ

ಫೋನ್ ಪೇನ್ ಪೇ, ಗೂಗಲ್ ಪೇ ಹಾಗೂ ಪೆಟಿಎಂ ಸಂಸ್ಥೆಗಳ ಜೊತೆ ಸಭೆ ನಡೆಸಿ ಪ್ರತಿ ದಿನದ ವಹಿವಾಟು, ಯಾವುದೇ ವ್ಯಕ್ತಿಯಿಂದ ನಿರ್ದಿಷ್ಟ ಮೊತ್ತದ ಹಣ ಹೆಚ್ಚಿನ ಸಂಖ್ಯೆಯ ಜನರಿಗೆ ರವಾನೆ ಮಾಡುತ್ತಿದ್ದರೆ ಅಂಥವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಮುಂದಾಗಿದ್ದು ಪ್ರತಿದಿನದ ಯುಪಿಐ ಡಿಜಿಟಲ್ ಹಣದ ವಹಿವಾಟಿನ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ.

ಮತದಾರರನ್ನು ಓಲೈಕೆ ಮಾಡಲು ಪೋನ್ ಪೇ, ಗೂಗಲ್ ಪೇ, ಯುಪಿಐ ತಂತ್ರಜ್ಞಾನದ ನೆರವಿನೊಂದಿಗೆ ಆದಷ್ಟು ಬೇಗ ಬಹುತೇಕ ಜನರಿಗೆ ಹಣ ಕಳಿಸಬಹುದು, ಯಾರಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆ ಇದ್ರೆ ಬಿಟ್ಟು ಬಿಡಿ ಆಯೋಗ ಪ್ರತಿಯೊಂದು ಡಿಜಿಟಲ್ ವಹಿವಾಟಿನ ಮೇಲೂ ಹದ್ದಿನ ಕಣ್ಣಿಟ್ಟಿದ್ದು ಅನುಮಾನ ಬಂದ ಖಾತೆ ಗಳ ಮೇಲೆ ತನಿಖೆ ನಡೆಸಲು ಕೂಡಾ ಮುಂದಾಗಿದೆ.

RELATED ARTICLES

Latest News