Friday, November 22, 2024
Homeರಾಷ್ಟ್ರೀಯ | National15 ರಾಜ್ಯಗಳ 56 ರಾಜ್ಯಸಭಾ ಸದಸ್ಯರ ಸ್ಥಾನಕ್ಕೆ ಚುನಾವಣೆ ಘೋಷಣೆ

15 ರಾಜ್ಯಗಳ 56 ರಾಜ್ಯಸಭಾ ಸದಸ್ಯರ ಸ್ಥಾನಕ್ಕೆ ಚುನಾವಣೆ ಘೋಷಣೆ

ಬೆಂಗಳೂರು, ಜ.29- ಕರ್ನಾಟಕದ ನಾಲ್ವರು ಸೇರಿದಂತೆ ರಾಷ್ಟ್ರದ 15 ರಾಜ್ಯಗಳ 56 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್‍ನಲ್ಲಿ ನಿವೃತ್ತಿ ಹೊಂದುವ 56 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು , ಫೆಬ್ರವರಿ 27 ರಂದು ಚುನಾವಣೆ ಜರುಗಲಿದೆ.

ಏಪ್ರಿಲ್ 2ರಂದು ನಿವೃತ್ತಿ ಆಗಲಿರುವ ಕರ್ನಾಟಕದ ರಾಜ್ಯಸಭಾ ಸದಸ್ಯರಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (ಬಿಜೆಪಿ), ಕಾಂಗ್ರೆಸ್ ಸದಸ್ಯರಾದ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಸೈಯದ್ ನಸೀರ್ ಹುಸೇನ್ ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ.

ಫೆಬ್ರವರಿ 8 ರಂದು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಲಿದ್ದು , ಅಂದಿನಿಂದ ಫೆ.15ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಫೆ. 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಫೆ.20 ಕಡೆ ದಿನ. ಅಗತ್ಯ ಬಿದ್ದರೆ ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದ್ದು , ಅಂದು ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಿಸಲಾಗುತ್ತದೆ.

ಜ್ಞಾನವ್ಯಾಪಿ ಸಮೀಕ್ಷೆ ವಿರೋಧಿಸುವವರು ತುಕ್ಡೆ ಗ್ಯಾಂಗ್‍ನ ಭಾಗವಾಗಿದ್ದಾರೆ : ಜಮಾಲ್

ಫೆ.29ರಷ್ಟರಲ್ಲಿ ರಾಜ್ಯಸಭೆ ಸದಸ್ಯರ ದ್ವೈವಾರ್ಷಿಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಉತ್ತರಪ್ರದೇಶ-10, ಮಹಾರಾಷ್ಟ್ರ-6, ಬಿಹಾರ-6, ಮಧ್ಯಪ್ರದೇಶ-5, ಗುಜರಾತ್-4, ಕರ್ನಾಟಕ-4, ತೆಲಂಗಾಣ- 3, ಒಡಿಶಾ-3, ರಾಜಸ್ಥಾನ-3, ಆಂಧ್ರಪ್ರದೇಶ-3,ಛತ್ತೀಸ್‍ಗಢ-1, ಹರಿಯಾಣ-1, ಹಿಮಾಚಲಪ್ರದೇಶ-1, ಉತ್ತರಖಂಡದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿದೆ.

ರಾಜಸ್ಥಾನದ 3 ರಾಜ್ಯಸಭಾ ಸದಸ್ಯರು ಏಪ್ರಿಲ್ 3 ರಂದು ನಿವೃತ್ತಿ ಆದರೆ ಉಳಿದ ರಾಜ್ಯಗಳ 53 ರಾಜ್ಯಸಭಾ ಸದಸ್ಯರು ಏಪ್ರಿಲ್ 2 ರಂದೇ ನಿವೃತ್ತಿಯಾಗಲಿದ್ದಾರೆ.

RELATED ARTICLES

Latest News