Thursday, May 2, 2024
Homeಬೆಂಗಳೂರುಹಾಲಕ್ಕಿ ನುಡಿತೈತೆ ಎನ್ನುತ್ತ ಬಂದ ಬುಡಬುಡಿಕೆಯವನು ಮಹಿಳೆ ಚಿನ್ನದ ಓಲೆಯೊಂದಿಗೆ ಪರಾರಿ

ಹಾಲಕ್ಕಿ ನುಡಿತೈತೆ ಎನ್ನುತ್ತ ಬಂದ ಬುಡಬುಡಿಕೆಯವನು ಮಹಿಳೆ ಚಿನ್ನದ ಓಲೆಯೊಂದಿಗೆ ಪರಾರಿ

ಬೆಂಗಳೂರು, ಜ.29- ಬುಡ ಬುಡಿಕೆಯೊಬ್ಬ ಮನೆಯೊಂದರ ಬಳಿ ಹೋಗಿ ನಿಮ್ಮ ಪತಿಗೆ ಗಂಡಾಂತರವಿದೆ ಪೂಜೆ ಮಾಡುವುದಾಗಿ ಮಹಿಳೆಯ ಗಮನ ಬೇರೆಡೆ ಸೆಳೆದು 4 ಗ್ರಾಂ ಚಿನ್ನದ ಕಿವಿಯೋಲೆಯೊಂದಿಗೆ ಪರಾರಿಯಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ಗುಬ್ಬಿ ಗ್ರಾಮದ ಜನತಾ ಕಾಲೋನಿ ನಿವಾಸಿ ಶಕುಂತಲಾ(25) ಎಂಬುವರು ಜ. 28ರಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಮನೆಯಲ್ಲಿದ್ದರು.

ಆ ವೇಳೆ ಬುಡಬುಡಿಕೆಯನ್ನು ನುಡಿಸುತ್ತಾ ಅಪರಿಚಿತ ವ್ಯಕ್ತಿ ಶಕುಂತಲಾ ಅವರ ಮನೆಯ ಬಳಿ ಹೋಗಿ ನಿನ್ನ ಗಂಡನಿಗೆ ಗಂಡಾಂತರವಿದೆ. ಪೂಜೆ ಮಾಡದಿದ್ದರೆ 9 ದಿನಗಳಲ್ಲಿ ಮರಣ ಹೊಂದುತ್ತಾರೆಂದು ತಿಳಿಸಿದ್ದಾರೆ. ಬುಡಬುಡಿಕೆ ವ್ಯಕ್ತಿಯ ಮಾತನ್ನು ಕೇಳಿ ಗಾಬರಿಯಾದ ಶಕುಂತಲಾ ಅವರು ಅದಕ್ಕೆ ಪರಿಹಾರವಿದೆಯೇ ಎಂದು ಕೇಳಿದ್ದಾರೆ. ಗಂಡನ ಆಯಸ್ಸುಗಾಗಿ ನಿಮ್ಮಿಂದಲೇ ಪೂಜೆ ಮಾಡಿಸುತ್ತೇನೆ ಎಂದು ಹೇಳಿ ಒಂದು ಮಡಿಕೆಯನ್ನು ಕೊಟ್ಟು, ಅಕ್ಕಿ, ಕುಂಕುಮ, ಅರಿಶಿಣ ಹಾಕಿ ಮತ್ತು ಕಿವಿಯೋಲೆ ಬಿಚ್ಚಿಡುವಂತೆ ತಿಳಿಸಿದ್ದಾನೆ.

ನನಗೆ ಸಿಎಂ ಆಗೋ ಆಸೆಯಿದೆ, ಆದರೆ ಸಿಗಬೇಕಲ್ಲ : ಎನ್.ಎ.ಹ್ಯಾರಿಸ್

ಆ ವ್ಯಕ್ತಿ ಹೇಳಿದಂತೆ ಶಕುಂತಲಾ ಅವರು ಮಾಡಿದ್ದಾರೆ. ನಂತರ ಕಣ್ಣು ಮುಚ್ಚಿ ಕುಳಿತುಕೊಳ್ಳಿ ಪೂಜೆ ಮಾಡುತ್ತೇನೆಂದು ತಿಳಿಸಿ, ಆ ಮಡಿಕೆ ಸುತ್ತಲೂ ದಾರಿ ಕಟ್ಟಿದ್ದಾನೆ. ಕೆಲ ಸಮಯದ ಬಳಿಕ ನಿಮ್ಮ ಗಂಡ ಬಂದ ನಂತರ ಪೂಜೆ ಮಾಡಿ ಕಿವಿಯೋಲೆ ತೆಗೆದುಕೊಳ್ಳಿ ಎಂದು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾನೆ. ಶಕುಂತಲಾ ಅವರು ಗಂಡ ಮನೆಗೆ ಬಂದ ನಂತರ ಮಡಿಕೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ 4 ಗ್ರಾಂ ಬಂಗಾರದ ಕಿವಿಯೋಲೆ ಇರಲಿಲ್ಲ.

ತಕ್ಷಣ ಮೋಸ ಹೋಗಿರುವುದು ಅರಿತು ಬುಡಬುಡಿಕೆ ವ್ಯಕ್ತಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಬುಡಬುಡಿಕೆ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.

ಬೆಳ್ತಂಗಡಿಯ ಸ್ಪೋಟ ಪ್ರಕರಣ ಒಬ್ಬನ ಬಂಧನ..
ಬೆಂಗಳೂರು,ಜ.29- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಡ್ತ್ಯಾರು ಬಳಿ ಪಟಾಕಿ ಗೋದಾಮಿನಲ್ಲಿ ಸ್ಪೋಟ ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಸಿದಂತೆ ಒಬ್ಬರನ್ನು ವೇಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಪೋಟದ ಬಳಿಕ ತಲೆಮರೆಸಿಕೊಂಡಿದ್ದ ಸೈಯ್ಯದ್ ಬಶೀರ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಜ್ಞಾನವ್ಯಾಪಿ ಸಮೀಕ್ಷೆ ವಿರೋಧಿಸುವವರು ತುಕ್ಡೆ ಗ್ಯಾಂಗ್‍ನ ಭಾಗವಾಗಿದ್ದಾರೆ : ಜಮಾಲ್

ಬೆಳ್ತಂಗಡಿ ಕಡ್ತ್ಯಾರು ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ನಿನ್ನೆ ಸಂಜೆ ಸ್ಪೋಟ ಸಂಭವಿಸಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದರು. ಅಲ್ಲದೆ ಅಕ್ಕಪಕ್ಕದ ಮನೆಗಳ ಛಾವಣಿ ಹಾನಿಗೀಡಾಗಿವೆ. ಸ್ಪೋಟದ ತೀವ್ರತೆ ಸುಮಾರು 5-6 ಕಿ.ಮೀ.ವರೆಗೂ ಕೇಳಿಬಂದಿದ್ದು, ಇದು ಪಟಾಕಿ ಸ್ಪೋಟವೇ ಅಥವಾ ನಾಡ ಗ್ರಾನೈಡ್ ತಯಾರಿಸಲಾಗುತ್ತಿತ್ತೇ, ಇಲ್ಲವೇ ನಾಡಬಾಂಬ್ ಇರಬಹುದೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ದೊರೆತ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆಗಿಂದಾಗ್ಗೆ ರಾಜ್ಯದಲ್ಲಿ ಇಂತಹ ಅನಾಹುತ ಸಂಭವಿಸಿ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ.

RELATED ARTICLES

Latest News