Wednesday, February 28, 2024
Homeರಾಷ್ಟ್ರೀಯಎಲೆಕ್ಟ್ರೀಕ್ ವಾಹನ ಬಳಕೆಯಲ್ಲಿ ದೆಹಲಿ ಫಸ್ಟ್

ಎಲೆಕ್ಟ್ರೀಕ್ ವಾಹನ ಬಳಕೆಯಲ್ಲಿ ದೆಹಲಿ ಫಸ್ಟ್

ನವದೆಹಲಿ, ಜ 3 (ಪಿಟಿಐ) ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಮಾರಾಟವಾದ ಒಟ್ಟು ವಾಹನಗಳಲ್ಲಿ ಶೇ.19.5ರಷ್ಟು ವಾಹನಗಳು ಎಲೆಕ್ಟ್ರೀಕ್ ವಾಹನಗಳಾಗಿರುವುದು ವಿಶೇಷ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ.

ದೆಹಲಿಯು ಜನರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಪ್ರೋತ್ಸಾಹಿಸುವ ನೀತಿಯನ್ನು ಹೊಂದಿದೆ ಮತ್ತು ಇದು ಅನೇಕ ವಿಸ್ತರಣೆಗಳ ನಂತರ ಡಿಸೆಂಬರ್ 31 ರಂದು ಕೊನೆಗೊಂಡಿತು. ಇದನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 2023 ರಲ್ಲಿ ಮಾರಾಟವಾದ ಒಟ್ಟಾರೆ ವಾಹನಗಳ ಶೇ.19.5 ಎಲೆಕ್ಟ್ರೀಕ ವಾಹನಗಳ ಮಾರಾಟವನ್ನು ದೆಹಲಿ ದಾಖಲಿಸಿದೆ. ಇದು ಇಲ್ಲಿಯವರೆಗಿನ ಭಾರತದ ಯಾವುದೇ ರಾಜ್ಯಗಳಲ್ಲಿ ಅತ್ಯಧಿಕವಾಗಿದೆ. ಒಟ್ಟಾರೆ 2023 ರಲ್ಲಿ ದೆಹಲಿಯು ಒಟ್ಟು 6,57,312 ವಾಹನಗಳನ್ನು ನೋಂದಾಯಿಸಿದ್ದು ಅದರಲ್ಲಿ 73,610 ಎಲೆಕ್ಟ್ರಿಕ್ ವಾಹನಗಳಾಗಿವೆ ಎಂದು ಗೆಹ್ಲೋಟ್ ಎಕ್ಸ್ ಮಾಡಿದ್ದಾರೆ.

ಜಾತಿ ರಾಜಕಾರಣದ ಮೂಲಕ ಸಮಾಜ ವಿಭಜನೆಗೆ ಕುತಂತ್ರ: ಯೋಗಿ ಆದಿತ್ಯನಾಥ್

ಜನವರಿಯಿಂದ ಡಿಸೆಂಬರ್‍ವರೆಗೆ ದೆಹಲಿಯಲ್ಲಿ ಇವಿ ಮಾರಾಟದ ಶೇಕಡಾವಾರು ಪ್ರಮಾಣವನ್ನು ಸಚಿವರು ಹಂಚಿಕೊಂಡಿದ್ದಾರೆ. ಮಾರ್ಚ್‍ನಲ್ಲಿ, ಮಾರಾಟವಾದ ಒಟ್ಟು ವಾಹನಗಳಲ್ಲಿ ಶೇ. 14.7 ರಷ್ಟು ಇವಿಗಳು, ವರ್ಷದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗಿದ್ದರೆ, ಮೇ ತಿಂಗಳಲ್ಲಿ ಶೇ.14.4 ರಷ್ಟಿತ್ತು.
ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ, ನಮ್ಮ ಎಲ್ಲಾ ನಾಗರಿಕರಿಗೆ ಸ್ವಚ್ಛ ಮತ್ತು ಹಸಿರು ದೆಹಲಿಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

RELATED ARTICLES

Latest News