Homeಮನರಂಜನೆಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು : ರಾಮಾಯಣ ಚಿತ್ರದ ಜಾಗತಿಕ ಪ್ರಚಾರಕ್ಕೆ 375 ಕೋಟಿ ರೂ. ಬಜೆಟ್‌..!

ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು : ರಾಮಾಯಣ ಚಿತ್ರದ ಜಾಗತಿಕ ಪ್ರಚಾರಕ್ಕೆ 375 ಕೋಟಿ ರೂ. ಬಜೆಟ್‌..!

375 Crore For Ramayana Promotions?

ಬೆಂಗಳೂರು/ಮುಂಬೈ,ಜು.25- ಭಾರತೀಯ ಸಿನಿ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ಬಹುನಿರೀಕ್ಷಿತ ಪೌರಾಣಿಕ ಚಿತ್ರ ರಾಮಾಯಣ ಮತ್ತೊಮೆ ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ನಿತೇಶ್‌ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯವು ತನ್ನ ಅದ್ಧೂರಿ ನಿರ್ಮಾಣದ ಜತೆಗೆ ಪ್ರಚಾರಕ್ಕಾಗಿ ಮೀಸಲಿಟ್ಟಿರುವ ಗಗನಚುಂಬಿ ಮೊತ್ತದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ವರದಿಗಳ ಪ್ರಕಾರ, ಈ ಸಿನಿಮಾದ ಜಾಗತಿಕ ಪ್ರಚಾರಕ್ಕಾಗಿ ಚಿತ್ರತಂಡ ಅಕ್ಷರಶಃ 375 ಕೋಟಿ ರೂಪಾಯಿಗಳನ್ನು ವ್ಯಯಿಸಲು ನಿರ್ಧರಿಸಿದೆ. ಹಾಲಿವುಡ್‌ನ ಪ್ರತಿಷ್ಠಿತ ೞಸೋನಿ ಪಿಕ್ಚರ್ಸ್‌ೞ ಸಂಸ್ಥೆಯು ಈ ಬೃಹತ್‌ ಪ್ರಚಾರಕ್ಕಾಗಿ 235 ಕೋಟಿ ರೂ. ಹೂಡಿಕೆ ಮಾಡುತ್ತಿದ್ದರೆ, ಚಿತ್ರದ ನಿರ್ಮಾಪಕರು ಹೆಚ್ಚುವರಿಯಾಗಿ 140 ಕೋಟಿ ರೂ.ಗಳನ್ನು ಖರ್ಚು ಮಾಡಲಿದ್ದಾರೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪ್ರಚಾರಕ್ಕಾಗಿ ಇಷ್ಟು ದೊಡ್ಡ ಮೊತ್ತವನ್ನು ಮೀಸಲಿಟ್ಟಿರುವುದು ಇದೇ ಮೊದಲ ಬಾರಿಯಾಗಿದೆ. ಹಾಲಿವುಡ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಮಾದರಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಲು ಈ ತಂತ್ರ ರೂಪಿಸಲಾಗಿದೆ.

ಬಾಲಿವುಡ್‌ ಸ್ಟಾರ್‌ ರಣಬೀರ್‌ ಕಪೂರ್‌ ಶ್ರೀರಾಮನಾಗಿ, ಪ್ರತಿಭಾವಂತೆ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್‌ ಸ್ಟಾರ್‌ಯಶ್‌ ಪ್ರಭಾವಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೆರಿಕದ ಹೆಸರಾಂತ ಸ್ಯಾನ್‌ ಡಿಯಾಗೋ ಕಾಮಿಕ್‌-ಕಾನ್‌ ಕಾರ್ಯಕ್ರಮದಲ್ಲಿ ಈ ಹಿಂದೆ ಭಾಗವಹಿಸಿದ್ದ ಚಿತ್ರತಂಡ, ಅಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಚಿತ್ರದ ಟೆಕ್ನಿಕಲ್‌ ಕ್ವಾಲಿಟಿ ಮತ್ತು ವಿಶ್ಯುಯಲ್‌್ಸ ಬಗ್ಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ರಾಮಾಯಣ ಚಿತ್ರದ ತಾಂತ್ರಿಕ ಗುಣಮಟ್ಟ ವಿಶ್ವದರ್ಜೆಯದ್ದಾಗಿರಲಿದೆ. ಆಸ್ಕರ್‌ ವಿಜೇತ ಭಾರತೀಯ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್‌್ಸ ಜಿಮರ್‌ ಅವರು ಜತೆಯಾಗಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಇನ್ನು, ಅತ್ಯಾಧುನಿಕ ವಿಎಫ್‌ಎಕ್‌್ಸ (ಗಿಈಘಿ) ತಂತ್ರಜ್ಞಾನವನ್ನು ಬಳಸಿ ಐಮ್ಯಾಕ್‌್ಸ ಪರದೆಗಳಿಗಾಗಿ ವಿಶೇಷವಾಗಿ ಈ ಚಿತ್ರವನ್ನು ರೂಪಿಸಲಾಗುತ್ತಿದೆ.

ಟ್ರೇಲರ್‌ ಬಿಡುಗಡೆ ಮುಂದೂಡಿಕೆ
ಮೂಲಗಳ ಪ್ರಕಾರ ಜುಲೈ 24ರಂದೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಸೋನಿ ಪಿಕ್ಚರ್ಸ್‌ ಸಹಭಾಗಿತ್ವದೊಂದಿಗೆ ಜಾಗತಿಕ ಮಟ್ಟದ ಬೃಹತ್‌ ಮಾರ್ಕೆಟಿಂಗ್‌ ಹಾಗೂ ಪ್ರಚಾರ ತಂತ್ರಗಳನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಕೊಂಚ ಮುಂದೂಡಲಾಗಿದೆ. ಶೀಘ್ರದಲ್ಲೇ ಟ್ರೇಲರ್‌ ದಿನಾಂಕ ಅಧಿಕೃತವಾಗಿ ಹೊರಬೀಳುವ ಸಾಧ್ಯತೆಯಿದೆ.

ಭಾರತೀಯ ಪೌರಾಣಿಕ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಮಾಯಣ ಚಿತ್ರತಂಡ ಹಾಕಿರುವ ಈ ಬೃಹತ್‌ ಹೆಜ್ಜೆ, ಜಾಗತಿಕ ಬಾಕ್‌್ಸ ಆಫೀಸ್‌‍ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.

RELATED ARTICLES
spot_img

Latest News